ಹುಬ್ಬಳ್ಳಿ –
ಧೀಮಂತ ಪ್ರಶಸ್ತಿ ವಿಜೇತ,ಕರವೇ ಅದ್ಯಕ್ಷ ಹಣ ಕೇಳಿದ ಆಡಿಯೋ ವೈರಲ್.
ಹುಬ್ಬಳ್ಳಿ:- ನವ್ಹಂಬರ ಒಂದರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕೊಡುವ ಧೀಮಂತ ಪ್ರಶಸ್ತಿ ಪಡೆದಿರುವ ಕರವೇ ಅದ್ಯಕ್ಷ ಮಂಜುನಾಥ ಲೂತಿಮಠ ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಹಣ ಕೇಳಿರುವ ಆಡಿಯೋ ಈಗ ವೈರಲ್ ಆಗಿದೆ.
ನವೆಂಬರ ಒಂದರಂದು ಹುಧಾ ಪಾಲಿಕೆ ಕೊಡ ಮಾಡೋ ಧೀಮಂತ ಪ್ರಶಸ್ತಿ ಪಡೆದ ಕರವೇ ಜಿಲ್ಲಾಧ್ಯಕ್ಷನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ..ರಾಜ್ಯೋತ್ಸವ ಅಂಗವಾಗಿ ಪಾಲಿಕೆ ಕರವೇ ಅಧ್ಯಕ್ಷ ಮಂಜುನಾಥ ಲೂಥಿಮಠಗೆ ಧೀಮಂತ ಪ್ರಶಸ್ತಿ ಕೊಟ್ಟಿತ್ತು.ಇದಾದ ಬೆನ್ನಲ್ಲೇ ನವೆಂಬರ ಎರಡರಂದು ಪ್ಲಾಸ್ಟಿಕ್ ವ್ಯಾಪಾರಿಗೆ ಸಚಿವರ ಹೆಸರಿನಲ್ಲಿ ಹಣ ಕೇಳಿದ್ದಾನೆ ಮತ್ತು ನನಗೆ ಧಮಕಿ ಹಾಕಿದ್ದಾನೆ ಎಂದು ವ್ಯಾಪಾರಿ ವಿಜಯ ಅಳಗುಂಡಗಿ ಟೌನ್ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ನೀಡಿದ ಬೆನ್ನಲ್ಲೇ ಪೋಲೀಸರು ಮಂಜುನಾಥ ಲೂತಿಮಠ ಅವರನ್ನು ಹುಡುಕಾಡುತ್ತಿದ್ದು ಕರವೇ ಅದ್ಯಕ್ಷನ ಮೊಬೈಲ್ ಸ್ವಿಚ್ಡ್ ಆಪ್ ಆಗಿದೆ.
ವೈರಲ್ಲ್ ಆದ ಆಡಿಯೋದಲ್ಲಿ ವಿಜಯ ಅಳಗುಂಡಗಿ ಜೊತೆ ಮಂಜುನಾಥ ಲೂತಿಮಠ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕರವೇ ಜಿಲ್ಲಾಧ್ಯಕ್ಷ ಮಾತಾಡಿದ್ದು ನೀವೆ ಕೇಳಿಬಿಡಿ…
ಒಂದು ಕಡೆ ಲೂಥಿಮಠ ಆಡಿಯೋ ವೈರಲ್ ಆದ್ರೆ ಇತ್ತ,ದೂರು ನೀಡಿರುವ ವ್ಯಾಪಾರಿ ವಿಜಯ ಅಳಗುಂಡ ಗಿಯನ್ನೇ ಮಂಜುನಾಥ ಲೂತಿಮಠ ಹಣ ಕೂಡಿಸಿ ಕೊಡಲು ಹೇಳಿದ್ದು ಯಾಕೆ? ಈ ನಿಷೇಧಿತ ಪ್ಲಾಸ್ಟಿಕ್ ವ್ಯಾಪಾರಿಗಳ ಜೊತೆ ಈ ವಿಜಯ ಅಳಗುಂಡಗಿ ಲಿಂಕ್ ಯಾಕೆ? ಪ್ಲಾಸ್ಟಿಕ್ ಅಂದ ತಕ್ಷಣ ಅಳಗುಂಡಗಿ ಬರೋದ ಯಾಕೆ.? ವಿಜಯ ಅಳಗುಂಡಗಿ ಅವರ ಸ್ಫೋಟಕ ಆಡಿಯೋ… ಶಿಘ್ರವೇ ಉದಯ ವಾರ್ತೆ ಎಕ್ಸಪೋಸ್ ಮಾಡಲಿದೆ…
ಉದಯ ವಾರ್ತೆ ಹುಬ್ಬಳ್ಳಿ