ದೂರು ನೀಡಲು ಬಂದ ಮಹಿಳೆಯೊಂದಿಗೆ ಡಿವೈಎಸ್ ಪಿ ಅಸಬ್ಯವಾಗಿ ವರ್ತಿಸಿದ ಪ್ರಕರಣ..ಡಿವೈಎಸ್ ಪಿ ರಾಮಚಂದ್ರಪ್ಪ ಸಸ್ಪೆಂಡ್…ಉದಯ ವಾರ್ತೆ ಇಂಪ್ಯಾಕ್ಟ್…
ತುಮಕೂರ:-ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಬ್ಯವಾಗಿ ವರ್ತಿಸಿದ ಡಿವೈಎಸ್ ಪಿ ರಾಮಚಂದ್ರಪ್ಪ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಸಸ್ಪೆಂಡ್ ಮಾಡಿ ಡಿಜಿ ಆ್ಯಂಡ್ ಐಜಿಪಿ ಡಾ ಅಲೋಕ ಮೋಹನ್ ಆದೇಶ ಮಾಡಿದ್ದಾರೆ.
ದೂರು ನೀಡಲು ಬಂದ ಮಹಿಳೆಯೊಂದಿಗೆ ಪೋಲೀಸ ಅಧಿಕಾರಿಯೊಬ್ಬ ರಾಸಲೀಲೆ ನಡೆಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಂತಾ ನಿನ್ನೆ ಉದಯ ವಾರ್ತೆ ವರದಿ ಪ್ರಸಾರ ಮಾಡಿತ್ತು.
ಹೌದು ಡಿವೈಎಸ್ ಪಿ ಕಛೇರಿಗೆ ದೂರು ಕೊಡಲು ಬಂದ ಮಹಿಳೆಯಬ್ಬಳನ್ನು ತನ್ನ ವಿಶ್ರಾಂತಿ ಕೊಠಡಿಯಲ್ಲಿ ಡಿವೈಎಸ್ ಪಿ ರಾಮಚಂದ್ರಪ್ಪ ಅಸಬ್ಯವಾಗಿ ವರ್ತಿಸಿದ ವಿಡಿಯೋ ಒಂದನ್ನ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತು.
ಜಮೀನು ವ್ಯಾಜ್ಯದ ವಿಚಾರದಲ್ಲಿ ದೂರು ನೀಡಲು ಮಹಿಳೆ ಬಂದಿದ್ದಳು ಅವಳೊಂದಿಗೆ ಸಲಿಗೆಯೊಂದಿಗೆ ನಡೆದುಕೊಂಡು ಡಿವಾಯ್ ಎಸ್ಪಿ ಕಛೇರಿಯ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋಗಿ ಅಸಬ್ಯವಾಗಿ ವರ್ತಿಸಿದ ವಿಡಿಯೋ ಆಗಿತ್ತು.ಆ ಸುದ್ದಿಯನ್ನು ಉದಯ ವಾರ್ತೆ ಪ್ರಸಾರ ಮಾಡಿತ್ತು.