ಕ್ರಿಕೆಟ್ ಬೆಟ್ಟಿಂಗ ದಂಧೆ. ಬೆಂಡಿಗೇರಿ ಪೋಲೀಸರ ಕಾರ್ಯಾಚರಣೆ…ಮೂವರ ಬಂಧನ..ಇಬ್ಬರು ಪರಾರಿ..
ಹುಬ್ಬಳ್ಳಿ:- ಐಪಿಎಲ್ ಕ್ರಿಕೆಟ್ ಆರಂಭವಾದಾಗಿನಿಂದ ಹುಬ್ಬಳ್ಳಿ ಪೋಲೀಸರು ಬೆಟ್ಟಿಂಗ ಕುಳಗಳ ಬೆನ್ನು ಬಿದ್ದಿದ್ದು ಈಗ ಬೆಂಡಿಗೇರಿ ಪೋಲೀಸರು ಕ್ರಿಕೆಟ್ ಬೆಟ್ಟಿಂಗ್ ಅಡ್ಡಾದ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದು ಇಬ್ಬರು ಪ್ರಮುಖ ಕ್ರಿಕೆಟ್ ಬುಕ್ಕಿಗಳು ಪರಾರಿಯಾಗಿದ್ದಾರೆ.
ಡಿಸಿ ಮತ್ತು ಕೆಕೆಆರ್ ಮದ್ಯೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗನಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ ಬೆಂಡಿಗೇರಿ ಪೋಲೀಸರು.1)ಮಹಮದ್ ಹುಸೇನ್ ಅಬ್ದುಲ್ ಗಫರ್
2)ನಂದಕುಮಾರ್ ಆನಂದ್ ಗೋಪಾಲ್.3)ಮುಸ್ತಾಕ್ ಅಹ್ಮದ್ ಮೀರಾಸಾಬ್ ಧಾರವಾಡ ಅವರನ್ನು ಬಂಧಿಸಿದ್ದು.ಪ್ರಮುಖ ಬುಕ್ಕಿಗಳಾದ 1)ಪವನ್ ಬಾರಡ್ ಕಮರಿಪೇಟ್
2)ಅನಿಲ್..ಮಂಟೂರ್ ರೋಡ್ ಪರಾರಿಯಾಗಿದ್ದಾರೆ.
ಹುಬ್ಬಳ್ಳಿ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಮುಖ ಬುಕ್ಕಿಗಳಿಗಾಗಿ ಬಲೆಬೀಸಿದ್ದಾರೆ.