ಹಾವು ಬಂತೊಂದು ಹಾವು..ಆರು ಅಡಿ ಉದ್ದದ ಹಾವು..ಹಾವು ಹಿಡಿದ ಉರಗ ಪ್ರೇಮಿ ರಮೇಶ..

Share to all

ಹಾವು ಬಂತೊಂದು ಹಾವು..ಆರು ಅಡಿ ಉದ್ದದ ಹಾವು..ಹಾವು ಹಿಡಿದ ಉರಗ ಪ್ರೇಮಿ ರಮೇಶ..

ಹುಬ್ಬಳ್ಳಿ: ಗೋಕುಲ ರಸ್ತೆಯ ಮುರಾರ್ಜಿ ನಗರ ನಿವಾಸಿಗಳ ನಿದ್ದೆಗೆಡಿಸಿದ್ದ ಸುಮಾರು 6
ಅಡಿ ಉದ್ದದ ಇಂಡಿಯನ್ ರ‍್ಯಾಟ್ ಸ್ನೇಕ್ ಅನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ
ಬಿಡುವಲ್ಲಿ ಉರಗ ಪ್ರೇಮಿ ರಮೇಶ ಕಾಳೆ ಯಶಸ್ವಿಯಾಗಿದ್ದಾರೆ.

ಕಳೆದ 3-4 ದಿನಗಳಿಂದ ಮುರಾರ್ಜಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಬೃಹತ್
ಗಾತ್ರದ ಕೆರೆ ಹಾವಿನಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಹಾವನ್ನು ಹಿಡಿಯಲು ಈ ಹಿಂದೆ
ಪ್ರಯತ್ನಿಸಿದ್ದರೂ ಕಾರ್ಯಾಚರಣೆ ವಿಫಲವಾಗಿತ್ತು.
ಗುರುವಾರ ಹಾವು ಪ್ರತಯ್ಯಕ್ಷವಾದ ತಕ್ಷಣ, ಸಾರ್ವಜನಿಕರು ಸ್ನೇಕ್ ರಮೇಶ್ ಅವರಿಗೆ
ದೂರವಾಣಿ ಕರೆ ಮಾಡಿದ್ದರು.

ತಕ್ಷಣ ಸ್ಥಳಕ್ಕಾಗಮಿಸಿದ ರಮೇಶ, ಗಟಾರಿನಲ್ಲಿ ಅಡಗಿ
ಕುಳಿತಿದ್ದ ಹಾವನ್ನು ಬರೀ ಕೈಯಲ್ಲೇ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಇದರಿಂದ ಮುರಾರ್ಜಿನಗರದ ಜನ ನಿಟ್ಟುಸಿರು ಬಿಡುವಂತಾಗಿದೆ. ಸ್ನೇಕ ರಮೇಶ ಈವರೆಗೂ 2500
ಕ್ಕೂ ಅಧಿಕ ಹಾವುಗಳನ್ನು ಸುರಕ್ಷಿತ ಸ್ಥಳಗಳಿಗೆ ಬಿಟ್ಟಿದ್ದಾರೆ. ಸಮಸ್ಯೆಗೊಳಗಾದವರು
ದೂ.ಸಂ. 9686428543 ಅಥವಾ 79754 38568ಗೆರ ಕರೆ ಮಾಡಬಹುದು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author