ಕೋರಿಯರ್ ಮೂಲಕ ಧಾರವಾಡ ಜಿಲ್ಲೆಗೆ ಗಾಂಜಾ..ಅಲ್ಲೂ ಬಿಡಲಿಲ್ಲಾ ಸಿಇಎನ್ ಪೋಲೀಸರು..
ಧಾರವಾಡ:- ಹೌದು ಪೋಲೀಸರು ಚಾಪೆ ಬುಡಕ್ಕಿ ನುಸುಳಿದರೆ ಅಕ್ರಮ ದಂಧೆಕೋರರು ರಂಗೋಲಿ ಕೆಳಗೆ ನುಸುಳತಾರೆ ಅನ್ನೋದಕ್ಕೆ ಧಾರವಾಡ ಸಿಇಎನ್ ಪೋಲೀಸರು ನಡೆಸಿದ ಗಾಂಜಾ ರೇಡ್ ಪ್ರಕರಣವೇ ಸಾಕ್ಷಿಯಾಗಿದೆ.
ದಂಧೆಕೋರರು ಬಸ್ಸು,ಕಾರು,ಟ್ರೇನ್ ಇನ್ನಿತರೆ ವಾಹನಗಳ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದದ್ದನ್ನು ಪೋಲೀಸರು ಬಂದ್ ಮಾಡಿದ್ದಾರೆ.ಆದರೆ ಈಗ ಅದೇ ದಂಧೆಕೋರರು ಅವೆಲ್ಲಾ ವಾಹನಗಳನ್ನು ಬಿಟ್ಟು ಈಗ ಕೋರಿಯರ್ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಆಧರಿಸಿ ಧಾರವಾಡ ಜಿಲ್ಲಾ ಸಿಇಎನ್ ಪೋಲೀಸರು ದಾಳಿ ನಡೆಸಿ ಎರಡು ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಆರೆಸ್ಟ್ ಮಾಡಿದ್ದಾರೆ.
ಓಡಿಸ್ಸಾದಿಂದ ಬೆಳಗಾವಿ ಮೂಲಕ ಕೋರಿಯರ್ ಮುಖಾಂತರ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಆಜಾನ್ ಮತ್ತು ತೌಕೀರ ಎಂಬುವವರನ್ನೇ ಪೋಲೀಸರು ಬಂಧಿಸಿದ್ದಾರೆ.