ಕೆಲಸಕ್ಕೆ ಹೋದ ಮಗ ಮನೆಗೆ ಮರಳಲಿಲ್ಲಾ….ಮಗನ ತಲೆ ಪೀಸ್..ಪೀಸ್..
ಹುಬ್ಬಳ್ಳಿ:- ಪ್ಯಾಕ್ಟರಿ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬ ಮರಳಿ ಮನೆಗೆ ಹೋಗುವಾಗ ಸ್ಕೂಟಿಗೆ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ಹೋದ ಪರಿಣಾಮ ಆತನ ತಲೆ ಪೀಸ್ ಪೀಸ್ ಆಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಬ್ಬಳ್ಳಿ ತಾರಿಹಾಳ ಬಳಿ ನಡೆದಿದೆ.
ಮೃತ ಪಟ್ಟ ವ್ಯಕ್ತಿಯನ್ನು ತಾರಿಹಾಳದ ರಾಮನಗರದ ಬಸು ಬಡಿಗೇರ ಎಂದು ಗುರುತಿಸಲಾಗಿದೆ.ವಾಹನವೊಂದು ಹಿಟ್ ಆ್ಯಂಡ್ ರನ್ ಮಾಡಿ ಹೋದ ಪರಿಣಾಮ ವ್ಯಕ್ತಿಯ ತಲೆ ಪೀಸ್..ಪೀಸ್ ಆಗಿ ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.