ನಾಡದೇವತೆಗೂ ಗೃಹ ಲಕ್ಷ್ಮೀ ಹಣ ಅರ್ಪಣೆ – ರಾಜ್ಯ ಸರ್ಕಾರದ ಪರವಾಗಿ ಐದು ವರ್ಷದ ಕಂತನ್ನು ಒಮ್ಮೆ ಸಂದಾಯ ಮಾಡಿದ ಸಚಿವೆ.
ಮೈಸೂರು –
ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ಗೃಹ ಲಕ್ಷ್ಮೀ ಯೋಜನೆಯಲ್ಲಿ ಹಣವನ್ನು ನೀಡುತ್ತಿದೆ.ಇನ್ನೂ ಈ ಒಂದು ಯೋಜನೆಯಲ್ಲಿ ನಾಡದೇವತೆ ಚಾಮುಂಡೇಶ್ವರಿ ತಾಯಿಗೂ ಕೂಡಾ ಗೃಹಲಕ್ಷ್ಮೀ ಯೋಜನೆಯಲ್ಲಿ ಹಣವನ್ನು ನೀಡಲಾಯಿತು.ಹೌದು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಚಾಮುಂಡೇಶ್ವರಿ ತಾಯಿಗೆ ಐದು ವರ್ಷದ ಕಂತನ್ನು ಒಮ್ಮೆ ಅರ್ಪಣೆ ಮಾಡಲಾಗಿದೆ.ಈ ಒಂದು ಯೋಜನೆಯಡಿಯಲ್ಲಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಲಾಗುತ್ತಿದ್ದು ಇತ್ತ ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೂ ಐದು ವರ್ಷಗಳ ಕಂತನ್ನು ರಾಜ್ಯ ಸರ್ಕಾರ ಸಂದಾಯ ಮಾಡಿದೆ.ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈ ಗೃಹ ಲಕ್ಷ್ಮೀ ಯೋಜನೆ ಕೂಡಾ ಒಂದಾಗಿದ್ದು ಹಾಗೆಯೇ ನಾಡ ಅಧಿದೇವತೆ ಚಾಮುಂಡೇಶ್ವರಿಗೂ ಪ್ರತಿ ತಿಂಗಳು ₹2 ಸಾವಿರದಂತೆ 5 ವರ್ಷದ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂದಾಯ ಮಾಡಿದ್ದಾರೆ.ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರಲ್ಲಿ ಗೃಹಲಕ್ಷ್ಮಿ ಯೋಜನೆಯಂತೆ 59 ತಿಂಗಳ 1.80 ಲಕ್ಷ ರೂ ಹಣವನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ್ದಾರೆ.ಈ ಹಿಂದೆ ಯೋಜನೆಗೆ ಚಾಲನೆ ನೀಡುವ ಮುನ್ನ ಚಾಮುಂಡೇಶ್ವರಿಗೆ 2 ಸಾವಿರ ರೂ ಹಣ ಸಮರ್ಪಿಸಲಾಗಿತ್ತು.ಇದೀಗ 59 ತಿಂಗಳ ಹಣವನ್ನು ನೀಡಲಾಗಿದೆ.ಗೃಹ ಲಕ್ಷ್ಮೀ ಯೋಜನೆಯಡಿ ತಾಯಿ ಚಾಮುಂಡೇಶ್ವರಿಗೂ ಪ್ರತಿ ತಿಂಗಳು 2 ಸಾವಿರ ಹಣ ಅರ್ಪಿಸುವಂತೆ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವೈಯಕ್ತಿಕವಾಗಿ 1.80 ಲಕ್ಷ ಹಣವನ್ನು ನಾಡದೇವಿಗೆ ಅರ್ಪಿಸಿದ್ದಾರೆ.
ಉದಯ ವಾರ್ತೆ ಮೈಸೂರು