ನಿಗಮ ಮಂಡಳಿ ಇಂದು ಪಟ್ಟಿ ಪೈನಲ್.ಧಾರವಾಡ ಜಿಲ್ಲೆಗೆ ಪ್ರಸಾದ್ ಅಬ್ಬಯ್ಯ ಪೈನಲ್.
ಬೆಂಗಳೂರು:-ವಿವಿಧ ನಿಗಮ ಮಂಡಳಿಗಳಿಗೆ ನೇಮಕಾತಿ ಪಟ್ಟಿ ಬಹುತೇಕ ಅಂತಿಮವಾಗಿದೆ.ಇಂದು ಬೆಂಗಳೂರಿಗೆ ಆಗಮಿಸಲಿರುವ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ಸಿಎಂ ಹಾಗೂ ಡಿಸಿಎಂ ಜೊತೆ ಕೊನೆಯ ಸುತ್ತಿನ ಮಾತುಕತೆ ನಡೆಸಿ ಇಂದು ಅಂತಿಮಗೊಳಿಸಲಿದ್ದಾರೆ.
24 ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಾಕಾಶ ನೀಡುವ ಸಂಭಂದ ಸಂಭಾವ್ಯ ಪಟ್ಟಿಯನ್ನು ಕಳೆದ ವಾರದ ಸಭೆಯಲ್ಲಿಯೇ ಅಂತಿಮಗೊಳಿಸಲಾಗಿದೆ.
ಕೆಲವು ಶಾಸಕರು ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಈಗ ನಮಗೆ ನಿಗಮ ಮಂಡಳಿಗಳಲ್ಲಿ ಬೇಡಾ ಕೊಡುವುದಾದರೆ ಮುಂದೆ ಮಂತ್ರಿ ಸ್ಥಾನ ಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
20 ಶಾಸಕರು,5 ಪರಿಷತ್ ಸದಸ್ಯರಿಗೆ 10 ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡುವುದು ಸ್ಪಷ್ಟವಾಗಿದೆ.ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಪಟ್ಟಿಯನ್ನು ಪೈನಲ್ ಮಾಡಬೇಕೆಂದು ಇಂದು ಸುರ್ಜೆವಾಲಾ ಬೆಂಗಳೂರಿಗೆ ಬರಲಿದ್ದಾರೆ.
ಈಗಾಗಲೇ ಧಾರವಾಡ ಜಿಲ್ಲೆಗೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ನಿಗಮ ಮಂಡಳಿ ಪೈನಲ್ ಆಗಿದೆ ಎನ್ನಲಾಗಿದೆ.
ಉದಯ ವಾರ್ತೆ ಬೆಂಗಳೂರು.