ಹುಬ್ಬಳ್ಳಿ.
ಚೋಟಾ ಮುಂಬೈನಲ್ಲಿ ಧೋ ನಂಬರ್ ದಂಧೆಗೆ ಏನೂ ಕಡಿಮೆ ಇಲ್ಲ.ದೋ ನಂಬರ್ ದಂಧೆಗಳು ಇಲ್ಲಿ ಖುಲ್ಲುಂ ಖುಲ್ಲಾ…ದೋ ನಂಬರ್ ದಂಧೆಗಳಿಗೆ ಎಷ್ಟೋ ಕಡೆ ಅಧಿಕಾರಿಗಳೇ ಬೆನ್ನಲೆಬು.ಕೆಲವು ಕಡೆ ಸಣ್ಣ ಪುಟ್ಟ ದಂಧೆಗೆ ಬ್ರೇಕ್ ಹಾಕಿ ದೊಡ್ಡದಾಗಿ ಪೋಜ್ ಕೊಡೋ ಅಧಿಕಾರಿಗಳಿಗೆ ಕಿಂಗ್ ಪಿನ್ ಗಳು ಕಾಣೋದೆ ಇಲ್ಲ.ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಕ್ಕಿ ರೇಡ್..ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ನವನಗರದಲ್ಲಿ 130 ಕ್ವಿಂಟಾಲ್ ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ 6 ಕ್ವಿಂಟಾಲ್ ಅಕ್ಕಿಯನ್ನು ಸಿಸಿಬಿ ಪೊಲೀಸರು ದಾಳಿ ಮಾಡಿದ್ರು.ಅಕ್ಕಿ ಕಳ್ಳತನದ ಕಿಂಗ್ ಪಿನ್ ಬಿಟ್ಟು,ಸಣ್ಣ ಪುಟ್ಟ ವ್ಯಾಪಾರಿಗಳನ್ನ ಪೊಲೀಸರು ರೇಡ್ ಮಾಡಿದ್ದರು. ಆದ್ರೆ ಈ ಅಕ್ಕಿ ಹೊಗೋದು ಅದೊಬ್ಬ ಕಿಂಗ್ ಪಿನ್ ಬಳಿ.ಆ ಕಿಂಗ್ ಪಿನ್ ಸಿಸಿಬಿ ಅಧಿಕಾರಿಗಳೂ ಫುಲ್ ಕ್ಲೋಸ್..ಆ ಕಿಂಗ್ ಪಿನ್ ಅನ್ನಭಾಗ್ಯ ಅಕ್ಕಿ ಖರೀದಿಗೆ ಮಕ್ಕಳನ್ನ ಬೀದಿಗೆ ತಂದಿದ್ದಾನೆ..ಎಸ್ ಇದು ನಾವ ಹೇಳೋದಲ್ಲ ಹುಬ್ಬಳ್ಳಿ ಪಾಲಿಕೆಯ ಕಾರ್ಪೋರೆಟರ್ ಪತಿ ಬಿಜೆಪಿ ಮುಖಂಡ ಶಶಿಕಾಂತ ಬೀಜವಾಡ ಅಕ್ಕಿ ಬಳಕೆಗೆ ಮಕ್ಕಳನ್ನ ಕಳಸ್ತಾರೆ.ಅದೊಂದು ದೊಡ್ಡ ಚೈನ್ ಲಿಂಕೇ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಇದಕ್ಕೆ ದಾಖಲೆಯೂ ಉದಯ ವಾರ್ತೆ ಬಳಿ ಇದೆ.ಅನ್ನಭಾಗ್ಯ ಅಕ್ಕಿ ಖರೀದಿ ಮಾಡಲು ದಂಧೆಕೋರರು ಮಕ್ಕಳನ್ನಬಳಕೆ ಮಾಡಿಕೊಳ್ತೀದ್ದಾರೆ.ಮಕ್ಕಳಿಗೆ ಹಣದಾಸೆ ತೋರಿಸಿ ಮನೆ ಮನೆಗೆ ಅಕ್ಕಿ ಖರೀದಿ ಮಾಡಲು ಕಳಸ್ತಿರೋದು ಬಟಾ ಬಯಲಾಗಿದೆ.ಏನೂ ಅರಿಯದ ಬಾಲಕರನ್ನ ಅಕ್ಕಿ ದಂಧೆಕೋರರು ತಮ್ಮ ದಂಧೆಗೆ ಬಳಸಿಕೊಳ್ತಿರೋದು ದುರಂತ.ಅನ್ನಭಾಗ್ಯ ಅಕ್ಕಿ ದಂಧೆ ಅನ್ನೋದು ವ್ಯವಸ್ಥೆಯ ಒಂದು ಭಾಗ ಆಗಿದೆ.ಅದೇನೆ ಮಾಡಿದ್ರು,ಅಕ್ಕಿ ಕಳ್ಳತನಕ್ಕೆ ಕಡಿವಾಣ ಹಾಕೋಕೆ ಆಗ್ತಿಲ್ಲ. ಆದ್ರೆ ಅಮಾಯಕ ಮಕ್ಕಳ ಬಳಕೆಯಾಗಬಾರದು ಅನ್ನೋದು ಉದಯ ವಾರ್ತೆಯ ಕಳಕಳಿ…
ಉದಯ ವಾರ್ತೆ ಹುಬ್ಬಳ್ಳಿ.