ಶಕ್ತಿ ಯೋಜನೆ ಶಕ್ತಿ ಪ್ರದರ್ಶನ.ಮಹಿಳೆಯರ ಜಡೆ ಜಗಳ.
ಹುಬ್ಬಳ್ಳಿ; ಕುರ್ಚಿಗಾಗಿ ಮಠ,ಮಂದಿರ ರಾಜಕಾರಣದಲ್ಲಿ ಗುದ್ದಾಟಗಳು ಕಾಮನ್ ಆದರೆ ರಾಜ್ಯ ಸರಕಾರ ಶಕ್ತಿ ಯೋಜನೆ ಜಾರಿಗೊಳಿಸಿದ್ದೇ ತಡ ಸೀಟ್ ಗಾಗಿ ಮಹಿಳೆಯರ ಹೊಡೆದಾಟ ಕಾಮನ್ ಆಗಿದೆ.
ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯಲ್ಲಿಯೂ ಕೂಡ ಮಹಿಳೆಯರು ಪರಸ್ಪರ ಹೊಡೆದಾಡಿದ ವಿಡಿಯೋ ವೈರಲ್ ಆಗಿದೆ.
ಹೌದು.. ಹಳೇ ಬಸ್ ನಿಲ್ದಾಣದಿಂದ ಕಿಮ್ಸ್ ಹೋಗುವ ಬಸ್ಸಿನಲ್ಲಿ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರು ಹೊಡೆದಾಡಿದ ಘಟನೆ ನಡೆದಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿದೆ ದೃಶ್ಯಗಳನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಇನ್ನೂ ಬಹುತೇಕ ಕಡೆಯಲ್ಲಿ ಮಹಿಳೆಯರು ಸೀಟ್ ವಿಷಯಕ್ಕೆ ಹೊಡೆದಾಡುತ್ತಿರುವುದು ನಿಜವಾದ ಶಕ್ತಿ ಯೋಜನೆಯ ಶಕ್ತಿ ಪ್ರದರ್ಶನ ಎಂಬುವಂತಾಗಿದೆ. ಇಂತಹದೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉದಯ ವಾರ್ತೆ ಹುಬ್ಬಳ್ಳಿ