ಅಕ್ರಮ ಸರಾಯಿ ಮಾರಾಟ ದಂಧೆ.ಹುಬ್ಬಳ್ಳಿ ಪೋಲೀಸರ ಕಾರ್ಯಾಚರಣೆ.ಓರ್ವನ ಬಂಧನ.
ಹುಬ್ಬಳ್ಳಿ:-ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದ ದಾಬಾ ಮೇಲೆ ಪೋಲೀಸರ ದಾಳಿ ಮಾಡಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಐರಾನ್ ಮ್ಯಾನ್ ಖ್ಯಾತಿಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ನೇತ್ರತ್ವದಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಲಾ್ಇದೆ. ಹುಬ್ಬಳ್ಳಿ ಸಮೀಪದ ಹೆಬಸೂರ ಬಳಿ ಇರುವ ಅದ್ಯಕ್ಷ ದಾಬಾದ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಪಿಆಯ್ ಮುರಗೇಶ ಚನ್ನಣ್ಣವರ ನೇತ್ರತ್ವದಲ್ಲಿ ದಾಳಿ ನಡೆಸಿದ್ದಾರೆ.
ಇಂದು ಮದ್ಯಾಹ್ನ ನಡೆದ ದಾಳಿ ವೇಳೆ 134 ಮದ್ಯದ ಟೆಟ್ರಾ ಪ್ಯಾಕ್ ಗಳನ್ನ ಸೀಜ್ ಮಾಡಲಾಗಿದೆ.ಈ ಕುರಿತು ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಬಕಾರಿ ಕಾಯ್ದೆ ಅಡಿ ಓರ್ವನನ್ನು ಬಂಧಿಸಲಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ