ಡಾ.ಶಿವಕುಮಾರ ಸ್ವಾಮೀಜಿ 80 ನೇ ಜಯಂತ್ಯುತ್ಸವ.ಭಕ್ತರಿಂದ ತುಲಾಭಾರ ಸೇವೆ.

Share to all

ಡಾ.ಶಿವಕುಮಾರ ಸ್ವಾಮೀಜಿ 80 ನೇ ಜಯಂತ್ಯುತ್ಸವ.ಭಕ್ತರಿಂದ ತುಲಾಭಾರ ಸೇವೆ.

ಕಲಘಟಗಿ: ತಾಲೂಕಿನ ತಾವರಗೇರಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸತ್ಸಂಗ ಬಳಗ ಕಲಘಟಗಿ, ತಾವರಗೇರಿ ಹಾಗೂ ಯಲವಧಾಳ ವತಿಯಿಂದ ಬೀದರನ ಶ್ರೀ ಚಿದಂಬರಾಶ್ರಮ ಸಿದ್ಧಾರೂಢ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ೮೦ನೇ ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಿತು.
ವಿವಿಧ ಗ್ರಾಮಗಳ ಹದಿನೈದು ಕುಟುಂಬಗಳ ಸದಸ್ಯರು ತುಲಾಭಾರ ಸೇವೆ ಸಲ್ಲಿಸಿದರು.
ಬೀದರನ ಶ್ರೀ ಚಿದಂಬರಾಶ್ರಮ ಸಿದ್ಧಾರೂಢ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಮೆರವಣಿಗೆ, ನವದಾನ ಅರ್ಪಣೆ, ತೊಟ್ಟಿಲೋತ್ಸವ, ಉಡಿ ತುಂಬುವುದು ಸೇರಿದಂತೆ ಸಂಗೀತ ಕಾರ್ಯಕ್ರಮಗಳು ನಡೆದವು.
ನಂತರ ಬೀದರನ ಶ್ರೀ ಚಿದಂಬರಾಶ್ರಮ ಸಿದ್ಧಾರೂಢ ಮಠದ ಡಾ.ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಲಬುರಗಿ ಶ್ರೀ ಸಿದ್ಧಾರೂಢ ಆಶ್ರಮದ ಮಾತೋಶ್ರೀ ಲಕ್ಷ್ಮೀ ತಾಯಿ, ತಾವರಗೇರಿ ಶ್ರೀ ಸಿದ್ಧಾರೂಢ ಮಠದ ನಿರ್ಗುಣಾನಂದ ಸ್ವಾಮೀಜಿ, ಬೀದರ ಶ್ರೀ ಸಿದ್ಧಾರೂಢ ಆಶ್ರಮದ ಮಾತೋಶ್ರೀ ಸಂಗೀತಾ ತಾಯಿ
ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮಕ್ಕೆ ಕಲಘಟಗಿ, ತಾವರಗೇರಿ, ಯಲವಧಾಳ, ಅರಳಿಹೊಂಡ, ಆಲದಕಟ್ಟಿ, ಮುಕ್ಕಲ್ಲ, ಬಮ್ಮಿಗಟ್ಟಿ, ನೆಲ್ಲಿಹರವಿ, ಸೊಮನಕೊಪ್ಪ, ಮಡಕಿಹೊನ್ನಳ್ಳಿ, ಬೇಗೂರ, ಧೂಳಿಕೊಪ್ಪ, ಹಿರೇಹೊನ್ನಳ್ಳಿ, ಬಗಡಗೇರಿ, ಕಾಮಧೇನು, ಹುಲ್ಲಂಬಿ, ಕುರವಿನಕೊಪ್ಪ, ಉಗ್ನಿಕೇರಿ, ಧುಮ್ಮವಾಡ, ದ್ಯಾವನಕೊಂಡ, ಹುಣಸಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀ ಸಿದ್ಧಾರೂಢ ಸದ್ಭಕ್ತ ಮಂಡಳಿ ಆಗಮಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ಸೇವೆ ನಡೆಯಿತು.

ಡಾ.ಎಸ್.ಬಿ.ಹುಲಿಕಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕ ಗ್ಯಾನಪ್ಪನವರ ನಿರೂಪಿಸಿದರು. ಪರಶುರಾಮ ಪಾಣಿಗಟ್ಟಿ ವಂದಿಸಿದರು.


Share to all

You May Also Like

More From Author