ಮೃತ ಅಭಿಮಾನಿಗಳ ಕುಟುಂಬದವರಿಗೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಿದ ಯಶ್ .ಮಾತು ಕೊಟ್ಟಂತೆ ಮೃತ ಅಭಿಮಾನಿಗಳ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಿದ ಯಶ್ ಆಪ್ತರು.
ಸೂರಣಗಿ –
ನಟ ಯಶ್ ಹುಟ್ಟು ಹಬ್ಬದ ದಿನದಿಂದು ಪ್ಲೇಕ್ಸ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಮೂವರು ಕುಟುಂಬದವರಿಗೆ ಪರಿಹಾರವನ್ನು ವಿತರಣೆ ಮಾಡಲಾಯಿತು.
ಹೌದು ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ಈ ಒಂದು ಅವಘಡ ನಡೆದಿತ್ತು. ಘಟನೆ ನಡೆದ ನಂತರ ನಟ ಯಶ್ ಕೂಡಾ ಗ್ರಾಮಕ್ಕೆ ಭೇಟಿ ನೀಡಿ ಮೃತರಾದ ಮೂವರು ಯುವಕರ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆಯನ್ನು ಕೂಡಾ ನೀಡಿದ್ದರು. ಇದೆಲ್ಲದರ ನಡುವೆ ಸಧ್ಯ ನುಡಿದಂತೆ ನಟ ಯಶ್ ನಡೆದುಕೊಂಡಿದ್ದು ಮೃತಪಟ್ಟ ಮೂವರು ಯುವಕರ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಲಾಗಿದೆ.ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ನ್ನು ನಟ ಯಶ್ ಆಪ್ತರು ನೀಡಿದ್ದಾರೆ.
ಕರೆಂಟ್ ಶಾಕ್ ಹೊಡೆದು ಮೂವರು ಮೃತಪಟ್ಟಿದ್ದರು.ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಾವಿನ ನಂತರ ಸಂತ್ರಸ್ತ ಕುಟುಂಬಕ್ಕೆ ನೆರವಾಗುತ್ತೇನೆಂದು ಯಶ್ ಕೂಡಾ ಮಾತುಕೊಟ್ಟಿದ್ದರು. ಅದರಂತೆ ಇದೀಗ ಮೃತ ಅಭಿಮಾನಿಗಳ ಕುಟುಂಬಕ್ಕೆ ಹಣ ಸಹಾಯವನ್ನು ಮಾಡಲಾಗಿದೆ.ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮುರಳಿ, ನವೀನ್ ಮತ್ತು ಹನುಮಂತ ಮೂವರು ನಿಧನರಾಗಿದ್ದರು.ಸಾಂತ್ವನ ಹೇಳಿ ಪರಿಹಾರದ ಭರವಸೆಯನ್ನು ನೀಡಿದ್ದರು ಸಧ್ಯ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ.ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್ ಗಳನ್ನು ಮೂರು ಕುಟಂಬದವರಿಗೆ ನೀಡಿದ್ದಾರೆ.ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ. ಯಶ್ ಸ್ನೇಹಿತರು ಕುಟುಂಬದವರನ್ನ ಭೇಟಿ ಮಾಡಿ ಸ್ನೇಹಿತರು ಪರಿಹಾರ ಹಣ ನೀಡುವ ಸಮಯದಲ್ಲಿ ಮೃತರಾದ ಯುವಕರ ಕುಟುಂಬಸ್ಥರು ಕಳೆದುಕೊಂಡ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಾಕಿರುವ ಚಿತ್ರಣ ಕಂಡು ಬಂದಿತು.
ಉದಯ ವಾರ್ತೆ ಗದಗ