ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ.ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ನೇರ ಪ್ರಸಾರ ವೀಕ್ಷಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Share to all

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ.ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ನೇರ ಪ್ರಸಾರ ವೀಕ್ಷಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ:-ಅಯೋದ್ಯಯಲ್ಲಿಯ ಶ್ರೀರಾಮ ಪ್ರಾಣ ಪ್ರತಿಷ್ಠಾನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ
ರಾಮನ ಭಕ್ತರೊಂದಿಗೆ ಎಲ್ ಇಡಿ ಪರದೆ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡಿದರು.

ಹುಬ್ಬಳ್ಳಿಯ ವೀರಾಪುರ ಓಣಿಯ ಗೊಲ್ಲರ ಕಾಲೋನಿಯಲ್ಲಿ ಬೃಹತ್ ಎಲ್ ಇಡಿ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡಿದ ಪ್ರಲ್ಹಾದ ಜೋಶಿ ಕಾಲೋನಿಯ ನಿವಾಸಿಗಳೊಂದಿಗೆ ನೇರ ಪ್ರಸಾರದ ವೀಕ್ಷಣೆ ಮಾಡಿದರು.
ಪ್ರಹ್ಲಾದ್ ಜೋಶಿಗೆ ಸ್ಥಳೀಯ ಮುಖಂಡರ ಸಾಥ್ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಜೋಶಿ
ನಮ್ಮ ಮನೆಗೆ ರಾಮ ಬಂದಿದ್ದಾನೆ ಅನ್ನೋ ರೀತಿನಲ್ಲಿ ಜನ ಖುಷಿಪಡುತ್ತಿದ್ದಾರೆ.ಇದೇ ರಾಮನ ಪ್ರತಿಷ್ಠಾಪನೆಗಾಗಿ 500 ವರ್ಷಗಳ ಹೋರಾಟ ನಡೆದಿತ್ತು.ಅತ್ಯಂತ ಸರಳವಾಗಿ ಸುಸೂತ್ರವಾಗಿ ರಾಮನ ಪ್ರತಿಷ್ಠಾಪನೆಯಾಗಿದೆ.
ರಾಮನೂ ಸಹ ಒಳ್ಳೆಯ ಭಕ್ತನಿಗಾಗಿ ಕಾಯುತ್ತಿದ್ದ
ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ಪ್ರಾಣ ಪ್ರತಿಷ್ಠಾಪನೆಯಾಗಿದೆ.

ಕರ್ನಾಟಕದಲ್ಲಿ ರಜೆ ನೀಡದೆ ಇರೋದಕ್ಕೆ ಜೋಶಿ ಕಿಡಿ.
ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ.
ಅಯೋಧ್ಯೆಗೆ ಹೋಗುವುದರ ಬಗ್ಗೆಯೇ ಅವರಲ್ಲಿ ಗೊಂದಲ
ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಕನ್ಫ್ಯೂಸ್ ನಲ್ಲಿದೆ
ಮೊದಲು ಆಹ್ವಾನ ಪತ್ರಿಕೆ ಬಂದಿಲ್ಲ ಅಂದ್ರು ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ಕೊಡಲಾಗಿತ್ತು.
ಆಹ್ವಾನ ಬಂದ ಮೇಲೆ ನಾವು ಹೋಗಲ್ಲ ಅಂದ್ರು.ಈಗ ರಜೆ ಕೊಡುವ ಕುರಿತು ಅವರಲ್ಲಿ ಗೊಂದಲ.ರಾಹುಲ್ ಗಾಂಧಿಯವರನ್ನ ಸಿದ್ದರಾಮಯ್ಯ ಕೇಳಿರಬೇಕು
ಅವರು ರಜೆ ಬೇಡ ಅಂದಿರಬೇಕು.ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ.ಮತಕ್ಕಾಗಿ ಸಿದ್ದರಾಮಯ್ಯ ಅಯೋಧ್ಯೆಗೆ ಈಗ ಹೋಗ್ತೀನಿ ಅಂತಿದ್ದಾರೆ.
ಎಂದು ಜೋಶಿ ಕಿಡಿಕಾರಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author