ಶೆಟ್ಟರ್ ನಿವಾಸಕ್ಕೆ ಬೇಟಿ ನೀಡಿದ ಕುಮಾರಸ್ವಾಮಿ
ಬಿಜೆಪಿಗೆ ಬರುವಂತೆ ಆಹ್ವಾನ.
ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೀಗ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೂಡ ಸಂಚಲನ ಮೂಡಿಸುತ್ತಿದ್ದಾರೆ. ಕಳೆದ ಬಾರಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಬಹುದೊಡ್ಡ ಸುದ್ದಿಯಾಗಿದ್ದರು ಇದೀಗ ಮತ್ತೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಹೋಗಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಕಳೆದ ಮೂರು ತಿಂಗಳ ಹಿಂದೆ ರಮೇಶ್ ಜಾರಕಿಹೊಳಿ ಶೆಟ್ಟರ್ ಅವರನ್ನು ಬೇಟಿ ಮಾಡಿ ಬೆಳಗಾವಿ ಯಿಂದ ಸ್ಪರ್ಧೆ ಮಾಡುವಂತೆ ಆವ್ಹಾನ ನೀಡಿದ್ದರು ಅಲ್ಲದೆ ಶೆಟ್ಟರ್ ಮನವೊಲಿಸುವಲ್ಲಿ ಯಶಸ್ವಿ ಕೂಡ ಆಗಿದ್ದರು. ಮುಂದುವರೆದ ಭಾಗವಾಗಿ ಇದೀಗ ಶೆಟ್ಟರ್ ಕೂಡ ಕಾಂಗ್ರೆಸ್ ನಲ್ಲಿ ಇರಲು ಇಷ್ಟಪಡುತ್ತಿಲ್ಲವಂತೆ. ಲೋಕಸಭೆ ಟಿಕೆಟ್ ಹಾಗೂ ಮಂತ್ರಿಗಿರಿ ನೀಡಿದರೆ ಮತ್ತೆ ಬಿಜೆಪಿಗೆ ಬರುವ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗಿನ ಜಾವ ಶೆಟ್ಟರ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶೆಟ್ಟರ್ ಅವರನ್ನು ವಾಪಸ್ ಬಿಜೆಪಿಗೆ ಕರೆತರುವ ಪ್ರಯತ್ನ ಈ ಬೇಟಿ ಎನ್ನಲಾಗುತ್ತಿದ್ದು. ಶೆಟ್ಟರ್ ಅವರಿಗೆ ಕೇಂದ್ರ ಮಂತ್ರಿಗಿರಿ ಜೊತೆಗೆ ಲೋಕಸಭಾ ಟಿಕೆಟ್ ನೀಡುವ ಅಪರ್ ನೀಡಲಾಗಿದ್ದು ಶೆಟ್ಟರ್ ಕೆಲ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.