ನಿವೇನಾದರೂ ಮನೆಯಲ್ಲಿ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿದ್ದರೇ ಈಗಲೇ ಮರಳಿಸಿ – ಏಪ್ರೀಲ್ 11 ರ ಒಳಗಾಗಿ ಮರಳಿ ನೀಡಲು ರಾಜ್ಯ ಸರ್ಕಾರ ಅವಕಾಶ ಮರಳಿ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗೋದಿಲ್ಲ.
ನಿವೇನಾದರೂ ಮನೆಯಲ್ಲಿ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿದ್ದರೇ ಈಗಲೇ ಮರಳಿಸಿ – ಏಪ್ರೀಲ್ 11 ರ ಒಳಗಾಗಿ ಮರಳಿ ನೀಡಲು ರಾಜ್ಯ ಸರ್ಕಾರ ಅವಕಾಶ ಮರಳಿ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗೊದಿಲ್ಲ
ಬೆಂಗಳೂರು –
ವನ್ಯಜೀವಿಗಳ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವವರಿಗೆ ರಾಜ್ಯ ಸರ್ಕಾರ ಮರಳಿ ನೀಡಲು ಒಂದು ಅವಕಾಶವನ್ನು ನೀಡಿದೆ.ಹೌದು ರಾಜ್ಯ ಸರ್ಕಾರ ಈ ಒಂದು ಕುರಿತಂತೆ ಮಹತ್ವದ ಆದೇಶವನ್ನು ಮಾಡಿದೆ ಹೌದು ವನ್ಯಜೀವಿಯ ವಸ್ತುಗಳನ್ನು ಸಾರ್ವಜನಿಕರು ಯಾರಾದರು ಮನೆಯಲ್ಲಿ ಇಟ್ಟುಕೊಂಡಿದ್ದರೆ ಮರಳಿ ನೀಡಲು ಸಾರ್ವಜನಿಕರಿಗೆ ಒಂದು ಅವಕಾಶವನ್ನು ನೀಡಿದೆ.ಇವುಗಳನ್ನು ಮನೆಯಲ್ಲಿ ಸಾರ್ವಜನಿಕರು ಇಟ್ಟುಕೊಳ್ಳೋದು ಅಪರಾಧವಾಗಿದ್ದು ಹೀಗಿದ್ದು ಗೊತ್ತಿಲ್ಲದೇ ಮನೆಯಲ್ಲಿ ಇಟ್ಟಿಕೊಂಡಿರೋರು ವಾಪಾಸ್ ಮಾಡೋದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ನೀವೆನಾದರೂ ಮನೆಯಲ್ಲಿ ವನ್ಯಜೀವಿ ಪದಾರ್ಥಗಳನ್ನು ಇಟ್ಟುಕೊಂಡಿದ್ರೇ ಸರ್ಕಾರ ನೀಡಿರುವಂತ ವಿಧಾನದಂತೆ ವಾಪಾಸ್ ನೀಡಿದ್ರೆ ನಿಮ್ಮ ವಿರುದ್ಧ ಕೇಸ್ ಆಗೋದಿಲ್ಲ ಎಂದು ಹೇಳಲಾಗಿದೆ.ಈ ಕುರಿತಂತೆ ರಾಜ್ಯ ಅರಣ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಕರ್ನಾಟಕ ಅರಣ್ಯ ಇಲಾಖೆಯು,ವನ್ಯಜೀವಿ, ಅಘೋಷಿತ ವನ್ಯಜೀವಿ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಏ.11 ರೊಳಗೆ ಮರಳಿ ನೀಡಲು ಒಂದು ಅವಕಾಶ ಕಲ್ಪಿಸಿದೆ ಈ ವಸ್ತುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ),ವಲಯ ಅರಣ್ಯಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ),ಅಥವಾ ಹತ್ತಿರದ ಪೊಲೀಸ್ ಠಾಣೆ ಮುಖ್ಯಸ್ಥರುಗಳಲ್ಲಿ ನಮೂನೆ-1ನ್ನು ಪಡೆದು ರೂ.100/-ಗಳ ಛಾಪಾ ಕಾಗದದಲ್ಲಿ ಅಫಿಡವಿಟ್ ಮುದ್ರಿಸಿ ನೋಟರಿ ಮಾಡಿಸಿ ನೀಡುವಂತೆ ತಿಳಿಸಲಾಗಿದೆ.ಇನ್ನೂ ಈ ಒಂದು ವಿಚಾರ ಕುರಿತಂತೆ ಏನಾದರೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಯಾವುದೇ ಅರಣ್ಯ ಇಲಾಖೆಯ ಕಚೇರಿಗೆ ಬೇಟಿ ನೀಡಿ, ಮಾಹಿತಿ ಪಡೆಯಬಹುದು. ನಿಮ್ಮ ಬಳಿ ವನ್ಯ ಜೀವಿ ಪದಾರ್ಥಗಳು ಇದ್ರೇ ಅಲ್ಲಿ ವಾಪಾಸ್ ಹಿಂದಿರುಗಿಸಿ ಅಂತ ಸೂಚಿಸಲಾಗಿದೆ.