ಧಾರವಾಡದಲ್ಲಿ ವಿವಾದಿತ ಸ್ಟೇಟಸ್ ಗಲಾಟೆ ವಿಚಾರ. ಗರಗ ಠಾಣೆ ಪಿಎಸ್‌ಐ ತಲೆದಂಡ.ಗರಗ ಠಾಣೆ ಪಿಎಸ್‌ಐ ಪ್ರಕಾಶ ಡಿ. ಅಮಾನತ್ತು.

Share to all

ಧಾರವಾಡದಲ್ಲಿ ವಿವಾದಿತ ಸ್ಟೇಟಸ್ ಗಲಾಟೆ ವಿಚಾರ.
ಗರಗ ಠಾಣೆ ಪಿಎಸ್‌ಐ ತಲೆದಂಡ.ಗರಗ ಠಾಣೆ ಪಿಎಸ್‌ಐ ಪ್ರಕಾಶ ಡಿ. ಅಮಾನತ್ತು.

ಧಾರವಾಡ:-ಧಾರವಾಡದ ತಡಕೋಡ ಗ್ರಾಮದಲ್ಲಿ ನಡೆದ ವಿವಾದಿತ ಸ್ಟೇಟಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಗ ಠಾಣೆಯ ಪಿಎಸ್ಐ ಅವರನ್ನು ಅಮಾನತು ಮಾಡಲಾಗಿದೆ.

ಉತ್ತರ ವಲಯ ಐಜಿ ವಿಕಾಸ ಕುಮಾರ್ ಪಿಎಸ್ಆಯ್ ಪ್ರಕಾಶ.ಡಿ ಅವರನ್ನುಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಧಾರವಾಡ ತಾಲೂಕಿನ ಗರಗ ಠಾಣೆ ಗರಗ ಠಾಣೆ ವ್ಯಾಪ್ತಿಯ ತಡಕೋಡದಲ್ಲಿ ನಡೆದಿದ್ದ ಸ್ಟೇಟಸ್ ಗಲಾಟೆ ವಿಚಾರಕ್ಕೆ ತಲೆದಂಡವಾಗಿದೆ.

ಕಳೆದ ವಾರ ರಾಮಮಂದಿರ ವಿರುದ್ಧ ಸದ್ದಾಂ ಹುಸೇನ ಎಂಬಾತ ಸ್ಟೇಟಸ್ ಹಾಕಿದ್ದ.
ಸದ್ದಾಮ ಹುಸೇನ್ ಬಂಧನದ ಬಳಿಕ ಗ್ರಾಮದಲ್ಲಿ ಗಲಾಟೆಯಾಗಿತ್ತು.ಸದ್ದಾಂ ಮನೆಯ ಎದುರು ಜನ ಜಮಾಯಿಸಿದ್ದರು.

ಗಲಾಟೆ ಬಳಿಕ ಗ್ರಾಮದಲ್ಲಿ ಉಂಟಾಗಿದ್ದ ಅಶಾಂತಿ ಹಿನ್ನೆಲೆಯಲ್ಲಿ ಮುಂಜಾಗ್ರತೆ ತೆಗೆದುಕೊಳ್ಳದೇ ಕರ್ತವ್ಯ ಲೋಪ ಎಸಗಿರೋ ಆರೋಪದ ಅಡಿಯಲ್ಲಿ ಅಮಾನತ್ತು ಮಾಡಲಾಗಿದೆ.

ಉದಯ ವಾರ್ತೆ ಧಾರವಾಡ.


Share to all

You May Also Like

More From Author