ಒಂದೇ ರಾತ್ರಿ ಕೊರಳಿಗೆ ತಾಳಿ.ತಾಳಿ ಕಟ್ಟಿಸಿಕೊಂಡ ರಾತ್ರಿಯೇ ಕೊರಳಿಗೆ ನೇಣು.ಅನೈತಿಕ ಲವ್ ಸ್ಟೋರಿ ದಿ ಎಂಡ್..
ಕಲಬುರಗಿ:-ನಿನ್ನೆ ರಾತ್ರಿ ಪ್ರೇಮಿಗಳಿಬ್ಬರು ರಾತ್ರಿ ಮದುವೆಯಾಗಿ ಅಂದೇ ರಾತ್ರಿ ನೇಣಿಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ (20) ಗೊಲ್ಲಾಳಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು.ಇವರಿಬ್ಬರೂ ಕಳೆದ ಹಲವು ದಿನಗಳಿಂದ ಒಬ್ಬರಿಗೊಬ್ಬರು ಪ್ರೀರಿಸುತ್ತಿದ್ದರು.ಇವರಿಬ್ಬರ ಪ್ರೀತಿಗೆ ಶಶಿಕಲಾನೆಯವರ ವಿರೋಧ ಇತ್ತಂತೆ.ಅಲ್ಲದೇ ಅವಳಿಗೆ ಬೇರೇ ಕಡೆ ಗಂಡು ನೋಡಿ ಮದುವೆ ನಿಶ್ಚಯ ಮಾಡಿದ್ದರು.
ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮನೆಯಿಂದ ಓಡಿ ಹೋಗಿ ಗ್ರಾಮದ ಹೊರ ವಲಯದ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಮದುವೆಯ ಪೋಟೋಗಳನ್ನು ಸೆಲ್ಪಿ ತೆಗೆದುಕೊಂಡು ಮನೆಯವರಿಗೆ ಹಾಕಿದ್ದಾರೆ.
ನಂತರ ಅಲ್ಲಿಯೇ ತೋಟವೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.