ತಲಾಷ್ ನಾಟಕ ನೋಡಾಕ ಎಲ್ಲರೂ ಬನ್ನಿ.ನಾನೂ ಬರತೇನಿ. ಸಚಿವ ಸಂತೋಷ ಲಾಡ್ ಮನವಿ.

Share to all

ತಲಾಷ್ ನಾಟಕ ನೋಡಾಕ ಎಲ್ಲರೂ ಬನ್ನಿ.ನಾನೂ ಬರತೇನಿ. ಸಚಿವ ಸಂತೋಷ ಲಾಡ್ ಮನವಿ.

ಹುಬ್ಬಳ್ಳಿ:- ಸಂತೋಷ್ ಲಾಡ್ ಫೌಂಡೇಷನ್ ಅರ್ಪಿಸುತ್ತಿರುವ ತಲಾಷ್ ನಾಟಕದ ಪೊಸ್ಟರ್ ಮತ್ತು ಟೀಸರ್ ಅನ್ನು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಖಾಸಗಿ ಹೊಟೆಲ್ ನಲ್ಲಿ ಬಿಡುಗಡೆಗೊಳಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಸಂತೋಷ ಲಾಡ್ ನಾಟಕ ತುಂಬಾ ವಿಭಿನ್ನವಾದ ಕಥಾವಸ್ತು ಹೊಂದಿರುವ ತಲಾಷ್ ನಾಟಕದಲ್ಲಿ ಮಾದ್ಯಮದ ಸ್ನೇಹಿತರು ಸೇರಿ ಸಿನಿಮಾ, ಕಿರುತೆರೆ ಕಲಾವಿದರು ಅಭಿನಯಸಿದ್ದು ಫೇಬ್ರುವರಿ 15ರಂದು ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ರಾತ್ರಿ 10.30ಕ್ಕೆ ನಾಟಕವನ್ನು ಪದರ್ಶಿಸಲಿದ್ದು ನಾನೂ ನಾಟಕ ವೀಕ್ಷಿಸಲು ಆಗಮಿಸುತ್ತಿದ್ದೇನೆ. ಆದಕಾರಣ ಎಲ್ಲರೂ ನಾಟಕ ನೋಡುವಂತೆ ಕರೆ ನೀಡಿದರು.

ಸೋಮು ರೆಡ್ಡಿ ರಚಿಸಿರುವ ಗದಿಗೆಯ್ಯ ಹಿರೇಮಠ ನಿರ್ದೇಶಿಸಿರುವ ಜೀವ ಕಲಾ ಬಳಗ ಪ್ರಸ್ತುತಪಡಿಸುತ್ತಿರುವ ತಲಾಷ್ ನಾಟಕ ಮನುಷ್ಯನ ಲಾಲಸೆ, ಮೋಹ, ಮತ್ಸರಗಳ ಸುತ್ತ ಹೆಣದ ಮೂಢನಂಬಿಕೆಗಳನ್ನ ವಿರೋಧಿಸುವ ಜ್ಯಾತಿವ್ಯವಸ್ಥೆಯನ್ನು ಧಿಕ್ಕರಿಸುವ ವಿಭಿನ್ನ ಕಥಾವಸ್ತು ಹೊಂದಿದ್ದು ಆಧುನಿಕ ಮತ್ತು ಸಂಪ್ರದಾಯಿಕ ರಂಗ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ಗ್ರಾಮೀಣ ಭಾಗಕ್ಕೆ ಇದೊಂದು ವಿಭಿನ್ನ, ನವ್ಯ ಅನುಭವ ನೀಡಲಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author