ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕಾನೂನು ಬಾಹಿರವಾಗಿ ಮುಂದುವರೆಸಿರುವ ಸ್ವಚ್ಛತೆ ಹೊರ ಗುತ್ತಿಗೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ನಿನ್ನೆಯಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮುಂದೆ ನಡೆಯುತ್ತಿರುವ ಗುತ್ತಿಗೆ ಪೌರ ಕಾರ್ಮಿಕರ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.ನಿನ್ನೆ ಸರಕಾರ ಮತ್ತು ಪಾಲಿಕೆಯ ವಿರುದ್ಧ ಕಪ್ಪು ಬಟ್ಟೆ ಕ್ಯೆಗೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದರು.ಅಹೋರಾತ್ರಿ ಧರಣಿ ನಡೆಸಿರುವ ಗುತ್ತಿಗೆ ಪೌರಕಾರ್ಮಿಕರು ಇಂದು ಅರೆಬೆತ್ತಲೆಯಾಗಿ ಧರಣಿ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲಾ ಎಸ್.ಸಿ ಎಸ್.ಟಿ ಪೌರಕಾರ್ಮಿಕರ ಸಂಘದವತಿಯಿಂದ ನಡೆಯುತ್ತಿರು ಈ ಧರಣಿ ಅವರ ಭರವಸೆ ಈಡೇರುವವರೆಗೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ