ಹುಬ್ಬಳ್ಳಿಯಲ್ಲಿಯ ಮೂವತ್ತು ವರ್ಷದ ಶೆಟ್ಟರ ಆಧಿಪತ್ಯ ಅಂತ್ಯ..? ನಾಳೆಯಿಂದ ಶೆಟ್ಟರ ಅಂಗಡಿ ಬೆಳಗಾವಿಗೆ ಸಿಪ್ಟ್..ಧಾರವಾಡ ಜಿಲ್ಲೆಯಲ್ಲಿ ಅವರೊಬ್ಬರೇ ಒಬ್ಬರೇ ಕಿಂಗ್ ಮೇಕರ್.
ಹುಬ್ಬಳ್ಳಿ:- ಹೌದು ಕಳೆದ ಮೂವತ್ತು ವರ್ಷದಿಂದ ಜೊಡೆತ್ತಿನಂತೆ ಹುಬ್ಬಳ್ಳಿಯಲ್ಲಿ ಬಿಜೆಪಿ ಚಕ್ಕಡಿಯ ನೊಗ ಹೊತ್ತು ಪಕ್ಷ ಕಟ್ಟಿದ್ದ ಆ ಇಬ್ಬರು ಬದಲಾದ ರಾಜಕೀಯದಲ್ಲಿ ಈಗ ಉತ್ತರ ದ್ರುವ ದಕ್ಷಿಣ ದ್ರುವದಂತೆ ಆದಂಗಾಯಿತು.
ಧಾರವಾಡ ಲೋಕಸಭೆಯ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಧಾರವಾಡ ಲೋಕಸಭೆ ಟಿಕೆಟ್ ಸಿಗದಂತಾಗಿ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಒಲಿಯಿತು.ಕೂಡಲೇ ಎಚ್ಚೆತ್ತ ಜಗದೀಶ ಶೆಟ್ಟರ ನಿನ್ನೆ ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಬೆಳಗಾವಿ ಕ್ಷೇತ್ರವನ್ನು ಗಟ್ಟಿಮಾಡಿಕೊಂಡು ಬಂದಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭೆ ಟಿಕೆಟ್ ಯಾವಾಗ ಶೆಟ್ಟರಗೆ ಮಿಸ್ ಆಯತೋ ಅಂದಿನಿಂದಲೇ ಜಗದೀಶ ಶೆಟ್ಟರ ಧಾರವಾಡ ಲೋಕಸಭೆ ಮೇಲೆ ಕಣ್ಣಿಟ್ಟು ಜೋಶಿ ಅವರಿಗೆ ಟಾಂಗ್ ಕೊಡಲು ಸಜ್ಜಾಗಿದ್ದು ಎಲ್ಲರಿಗೂ ಗೊತ್ತು.
ಆದರೆ ಪ್ರಹ್ಲಾದ ಜೋಶಿ ಅವರ ಅಭಿವೃದ್ದಿ ಮತ್ತು ಪಕ್ಷ ಸಂಘಟನೆಯಿಂದ ಹೈಕಮಾಂಡ್ ಮತ್ತೆ ಅವರಿಗೆ ಟಿಕೆಟ್ ನೀಡಿದ್ದಾರೆ.
ಆದರೆ ಒಂದು ಕಡೆ ಕಾರ್ಯಕರ್ತರು ನಮ್ಮ ಸಾಹೇಬ್ರು ಬಹಳ ಇಂಟಲಿಜೆಂಟ್ ಜಾಣಾಕ್ಷತನದಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಟ್ರು ಅಂತಾ ಮಾತಾಡಿಕೊಳ್ಳತಿದ್ದಾರೆ.
ಒಟ್ಟಿನಲ್ಲಿ ಜಗದೀಶ ಶೆಟ್ಟರ ಅವರನ್ನು ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡುವ ಬಿಜೆಪಿ ಅಪರೇಶನ್ ಸಕ್ಸಸ್ ಆದಂಗಾಯಿತು ಅಂತಾ ಶೆಟ್ಟರ ವಿರೋಧಿ ಬಣ ಒಳಗೊಳಗೆ ಖುಷಿಪಡತಿದ್ದಾರೆ.ಅಷ್ಟೇ ಅಲ್ಲದೆ ಜಗದೀಶ ಶೆಟ್ಟರ ಅವರನ್ನು ನಂಬಿದ ಮುಖಂಡರು ಮತ್ತು ಕಾರ್ಯಕರ್ತರು ಬೆಳಗಾವಿಗೋ ಇಲ್ಲಿಯೋ ಕಾದು ನೋಡಬೇಕಾಗುತ್ತೇ.