ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ಮನೆ ಮನೆಗೆ ಪ್ರಚಾರಕ್ಕಿಳಿದ ಬಿಜೆಪಿ ಯುವ ಮುಖಂಡ ಅನೂಪಕುಮಾರ ಬಿಜವಾಡ ಆ್ಯಂಡ್ ಟೀಮ್.
ಹುಬ್ಬಳ್ಳಿ:- ಧಾರವಾಡ ಲೋಕಸಭೆ ಚುನಾವಣೆ ದಿನ ದಿಂದ ದಿನಕ್ಕೆ ರಂಗೇರುತ್ತಿದ್ದು.ಬಿಜೆಪಿ ಟೀಮ್ ಪ್ರಹ್ಲಾದ ಜೋಶಿ ಪರವಾಗಿ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಹುಬ್ಬಳ್ಳಿಯ ವಾಡ್ ನಂಬರ 80 ರ ಉಸ್ತುವಾರಿಯಾಗಿ ನೇಮಕಗೊಂಡಿರುವ ಯುವ ಮುಖಂಡ ಅನೂಪಕುಮಾರ.ಬಿಜವಾಡ ತನ್ನ ಟೀಮಿನೊಂದಿಗೆ ನರೇಂದ್ರ ಮೋದೀಜಿ ಅವರ ಕೇಂದ್ರ ಸರಕಾರದ ಯೋಜನೆಗಳು ಹಾಗೂ ಪ್ರಹ್ಲಾದ ಜೋಶಿ ಅವರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಧಾರವಾಡಕ್ಕೆ ಪ್ರಹ್ಲಾದ ಜೋಶಿ ಎಂದು ಹೇಳುತ್ತಾ ಪ್ರಚಾರ ನಡೆಸಿದ್ದಾರೆ.
ಅಲ್ಲದೇ ನನ್ನ ಪರಿವಾರ ಮೋದಿ ಪರಿವಾರ ಎನ್ನುವ ಸ್ಟಿಕರ್ ಅಂಟಿಸುವ ಮೂಲಕ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ.ಅನೂಪಕುಮಾರ ಬಿಜವಾಡಗೆ ವಿಭಾಗ ಸಂಘಟನಾ ಪ್ರಭಾರಿ ನಾರಾಯಣ ಜರತಾರಘರ.ಪಾಲಿಕೆ ಸದಸ್ಯರಾದ ಹಿರೇಮಠ.ವಾರ್ಡಿನ ಪ್ರಮುಖರಾದ ಗೋವಿಂದ್ ಬೇಂದ್ರೆ. ವಾರ್ಡಿನ ಅದ್ಯಕ್ಷರಾದ ರಾಮಲಿಂಗ ಸಲಂ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.