CEN ಪೋಲೀಸ ಠಾಣೆ ಮೆಟ್ಟಲೇರಿದ ನೇಹಾ ಇನ್ಸ್ಟಾಗ್ರಾಂ ಪ್ರಕರಣ.ಇನ್ ಸ್ಟಾ ಗ್ರಾಂ ಐಡಿ ಬ್ಲಾಕ್ ಮಾಡುವಂತೆ ನೇಹಾ ತಾಯಿ ದೂರು.
ಹುಬ್ಬಳ್ಳಿ:- ನೇಹಾ ಹಿರೇಮಠ ಹತ್ಯೆಯಾದ ನಂತರದ ಬೆಳವಣಿಗೆಯಲ್ಲಿ ಇನ್ ಸ್ಟಾ ಗ್ರಾಂ ನಲ್ಲಿ ನೇಹಾ ಪೋಟೋಗಳು ಹರಿದಾಡುತ್ತಿದ್ದು ಆ Instagrame ಬ್ಲಾಕ್ ಮಾಡಬೇಕೆಂದು ನೇಹಾ ತಾಯಿ ಗೀತಾ ಸಿಇಎನ್ ಪೋಲೀಸ ಠಾಣೆಗೆ ದೂರು ನೀಡಿದ್ದಾರೆ.
fayazneha2024 ಎಂಬ ಮೂರು ಇನ್ ಸ್ಟಾ ಗ್ರಾಂ ಅಕೌಂಟನಿಂದ ನೇಹಾ ಪೋಟೋ ವೈರಲ್ ಆಗುತ್ತಿವೆ.ಆ ಹಿನ್ನೆಲೆಯಲ್ಲಿ ಆ ಮೂರು ಇನ್ ಸ್ಟಾ ಗ್ರಾಂ ಅಕೌಂಟನ್ನ ಬ್ಲಾಕ್ ಮಾಡಬೇಕು ಹಾಗೂ ಎಡಿಟ್ ಮಾಡಿ ಪೋಟೋ ವೈರಲ್ ಮಾಡುವವರ ಮೇಲೆ ಕ್ರಮಕೈಕೊಳ್ಳ ಬೇಕೆಂದು ಗೀತಾ ಹಿರೇಮಠ ದೂರು ನೀಡಿದ್ದಾರೆ.
ಕಳೆದ 18 ರಂದು ಬಿವಿಬಿ ಕಾಲೇಜ್ ಕ್ಯಾಂಪಸ್ಸ್ ನಲ್ಲಿ ನೇಹಾ ಹಿರೇಮಠ ಬರ್ಭರ ಹತ್ಯೆಯಾಗಿತ್ತು.ಅಂದಿನಿಂದ ಇಂದಿನವರೆಗೆ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಆರೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.