ಫಯಾಜ್ ಕುರಿತು ಮತ್ತಷ್ಟು ಆತಂಕಕಾರಿ ವಿಷಯ ಬಯಲಿಗೆ. ಕೊಲೆ ಮಾಡೋ ಐದು ದಿನ ಮುನ್ನ ಚಾಕು ಖರೀದಿ ಮಾಡಿದ್ದ ಫಯಾಜ್.

Share to all

ಫಯಾಜ್ ಕುರಿತು ಮತ್ತಷ್ಟು ಆತಂಕಕಾರಿ ವಿಷಯ ಬಯಲಿಗೆ.
ಕೊಲೆ ಮಾಡೋ ಐದು ದಿನ ಮುನ್ನ ಚಾಕು ಖರೀದಿ ಮಾಡಿದ್ದ ಫಯಾಜ್.

ಹುಬ್ಬಳ್ಳಿ:-ನೇಹಾ ಕೊಲೆಗೂ ಮೊದಲೇ ಸ್ಕೆಚ್ ಹಾಕಿದ್ದ ಫಯಾಜ್ ಐದು ದಿನದ ಮೊದಲೇ ಚಾಕು ಖರೀದಿಸಿ ಬ್ಯಾಗಿನಲ್ಲಿ ಇಟ್ಟುಕೊಂಡು ತಿರುಗಾಡಿದ್ದ ಎಂಬ ಆತಂಕಕಾರಿ ವಿಷಯ ಬಯಲಾಗಿದೆ.

ಕೊಲೆ ಮಾಡುವ ಐದು ದಿನ ಮೊದಲೇ ಧಾರವಾಡದಲ್ಲಿ ಚಾಕು ಖರೀದಿ ಮಾಡಿದ್ದ.
ನೇಹಾಳನ್ನು ಕೊಲೆ ಮಾಡೋ ಉದ್ದೇಶದಿಂದಲೇ ಚಾಕು ಖರೀದಿಸಿದ್ದಾಗಿ ಫಯಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನಂತೆ.

ಚಾಕು ಖರೀದಿ ಮಾಡಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಓಡಾಡಿದ್ದ ಫಯಾಜ್.ನನಗೆ ಸಿಗದ ನೇಹಾ ಮತ್ತೆ ಯಾರಿಗೂ ಸಿಗಬಾರದು ಅಂತಾ ನೇಹಾ ವಿರುದ್ದ ಹಗೆ ಸಾಧಿಸಿತ್ತಿದ್ದ ಫಯಾಜ್‌.

ಹೀಗಾಗಿ ನೇಹಾಳ ಪ್ರತಿಯೊಂದು ಮೂವಮೆಂಟ್ ಆಬ್ಸರ್ವ್ ಮಾಡ್ತಿದ್ದ ಫಯಾಜ್
ಎಪ್ರೀಲ್ 18 ರಂದು ನೇಹಾಳನ್ನು ಎರಡುವರೆ ಗಂಟೆ ಕಾದು ಕೊಲೆ‌ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಕೊಲೆ ಮಾಡೋ ಮುನ್ನ ಬೈಕ್ ಹ್ಯಾಂಡಲ್ ಲಾಕ್ ಮಾಡದೇ
ಗೇಟ್ ಹೊರಗಡೆ ನಿಲ್ಲಿಸಿ
ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಲು ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದಾಗಿ ಹೇಳಿದ್ದಾನೆ.

ಸದ್ಯ ಶೇಕಡಾ 60 ರಷ್ಟು ತನಿಖೆ ಮುಗಿಯೋ ಬೆನ್ನಲ್ಲೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author