ಹುಬ್ಬಳ್ಳಿಯಲ್ಲಿ ಹಸುಗೂಸು ಮಾರಾಟ ಜಾಲ.? ಬಡತನವನ್ನೇ ಬಂಡವಾಳ ಮಾಡಿಕೊಂಡರಾ ಆಸ್ಪತ್ರೆ ಸಿಬ್ಬಂದಿಗಳು..
ಹುಬ್ಬಳ್ಳಿ:- ಹೌದು ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟದ ಶಂಕೆ ಈಗ ಕೇಳಿ ಬಂದಿದೆ.ಆಸ್ಪತ್ರೆಯ ಬಿಲ್ಲ್ ಕಟ್ಟಲು ಆಗದಿದ್ದರೆ ನಿಮ್ಮ ಎರಡು ಮಕ್ಕಳಲ್ಲಿ ಒಂದು ಮಗುವನ್ನು ಕೊಡಿ ಅದರಲ್ಲಿ ಆಸ್ಪತ್ರೆಯ ಬಿಲ್ ಹಾಗೂ ನಿಮಗೂ ಹಣ ಕೊಡತೇವಿ ಅಂತಾ ಮಗುವಿನ ತಾಯಿ ಹಾಗೂ ತಂದೆಗೆ ಒತ್ತಾಯ ಮಾಡತಿದ್ದಾರೆ ಅಂತಾ ಪೋಷಕರು ಆರೋಪಿಸಿದ್ದಾರೆ.
ಪ್ರತಿಷ್ಠಿತ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ಅಂತಾ ಹೇಳಿಕೊಂಡು ನಿಮಗೆ ಮಗು ಸಾಕುವುದು ಆಗುವುದಿಲ್ಲಾ.ನಾವು ಒಯ್ಯದು ಸಾಕತೇವಿ ನಿಮಗೆ ಹಣ ಕೊಡತೇವಿ ಅಂತಾ ಹೇಳಿದ್ದಾಗಿ ಮಗುವಿನ ತಂದೆ ತಾಯಿ ಆರೋಪಿಸಿದ್ದಾರೆ.
ಸದ್ದಿಲ್ಲದೇ ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಮಕ್ಕಳ ಮಾರಾಟ ಮಾಡುವ ದಂಧೆಕೋರರ ಬಗ್ಗೆ ಸಂಬಂಧಿಸಿದ ಇಲಾಖೆ ತನಿಖೆ ಮಾಡಿ ಮಕ್ಕಳ ಮಾರಾಟನಾ..ಏನಿದು ಅಂತಾ ತನಿಖೆ ಮಾಡಬೇಕಿದೆ.