ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿ ಬಿಟ್ಟ ಪತಿ.ಪತಿಗಾಗಿ ಮನೆ ಮುಂದೆ ಧರಣಿ ಕುಳಿತ ರುಕ್ಷಾನಾ.ಪತ್ನಿ ಬರುವ ವಿಚಾರ ತಿಳಿದು ಪರಾರಿಯಾದ ಗಂಡ.
ಹುಬ್ಬಳ್ಳಿ:-ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಪತ್ನಿಯನ್ನೇ ತಿರಸ್ಕಾರ ಮಾಡಿದ ಪತಿಯ ನಡೆಯನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ ಪತಿಯ ಮನೆಯ ಮುಂದೆ ಪತ್ನಿ ಪತಿಗಾಗಿ ಧರಣಿ ಆರಂಭಿಸಿದ್ದಾಳೆ.
ಹುಬ್ಬಳ್ಳಿಯ ವಿದ್ಯಾನಗರದ ಮಹ್ಮದಗೌಸ ಎಂಬುವವರು ಯಲ್ಲಾಪುರದ ರುಕ್ಷಾನಾ ಎಂಬುವಳ ಜೊತೆ ಮದುವೆ ಆಗಿ ಒಂದು ಹೆಣ್ಣು ಮಗು ಕೂಡಾ ಆಗಿದೆ.ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣ ಒಡ್ಡಿ ಪತ್ನಿಯನ್ನು ತಿರಸ್ಕರಿಸಿದ ಪತಿ ಮಹ್ಮದಗೌಸ್ ನೀ ನನಗೆ ಬೇಡಾ ಎಂದು ತವರು ಮನೆಯಲ್ಲಿಯೇ ಬಿಟ್ಟಿದ್ದಾ.
ಇಂದು ನನಗೆ ನನ್ನ ಗಂಡ ಬೇಕು ಎಂದು ಮನೆಗೆ ಬರುತ್ತಿದ್ದಂತೆ ಪತಿ ಮನೆಗೆ ಕೀಲಿ ಹಾಕಿ ಪರಾರಿಯಾಗಿದ್ದಾನೆ.ಅಲ್ಲದೇ ಮದುವೆ ಆಗುವಾಗ ನಾನು ಸಾಫ್ಟವೇರ್ ಎಂಜನೀಯರ್ ಅಂತಾ ಸುಳ್ಳು ಬೇರೇ ಹೇಳಿ ಮದುವೆಯಾಗಿದ್ದಾನಂತೆ.
ಈಗ ಪತ್ನಿ ರುಕ್ಷಾನಾ ನನಗೆ ಪತಿ ಬೇಕು ಎಂದು ತನ್ನ ಮಗಳು ಹಾಗೂ ಕುಟುಂಬದ ಜೊತೆ ಪತಿಯ ಮನೆಯ ಮುಂದೆ ಧರಣಿ ಆರಂಭಿಸಿದ್ದಾಳೆ.