ಬೆಂಗಳೂರಿಗೆ ಏನಾಗಿದೆ: ಮಹಿಳೆ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ಕಾರು ತರಬೇತುದಾರ.!

Share to all

ಬೆಂಗಳೂರು: .ಪ್ರತಿದಿನ ಇಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಇದೀಗ ಹೆಣ್ಣುಮಕ್ಕಳಿಗೆ ಬೆಂಗಳೂರು ಎಷ್ಟು ಸೇಫ್ ಎಂಬ ಪ್ರಶ್ನೆ ಮೂಡಿದೆ. ಇಂಥ ಘಟನೆ ಕಂಡು ಮಹಿಳೆಯರು ಹೊರ ಬರಲು ಹೆದರುವಂತಾಗಿದೆ.ಕಾರು ಚಾಲನೆ ತರಬೇತಿ ನೀಡುವಾಗ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವರ್ತನೆ ತೋರಿದ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರನ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಾಲಕ್ಷ್ಮಿಪುರದ 18 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   ಇನ್ನು ಕಾರಿ ಚಾಲನಾ ತರಬೇತಿದಾರನ ಅಸಭ್ಯ ವರ್ತನೆಯ ಬಗ್ಗೆ ಮಾಧ್ಯಮಗಳಲ್ಲಿ,

ಸುದ್ದಿ ಬಿತ್ತರವಾಗಿರುವುದನ್ನು ಗಮನಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಬಸವೇಶ್ವರನಗರ ಮಾರುತಿ ಡ್ರೈವಿಂಗ್ ಸ್ಕೂಲ್ ಪರವಾನಗಿ ಹಾಗೂ ಚಾಲಕ ಅಣ್ಣಪ್ಪ ಚಾಲನಾ ಪರವಾನಗಿ ಕೂಡಲೇ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನಿರ್ದೇಶನ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ.


Share to all

You May Also Like

More From Author