ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎಗಳು ಮತ್ತು ಮೊಬೈಲ್ ಚಾರ್ಜರ್ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ.
ಇಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಮಹತ್ವದ ಯೋಜನೆಗಳಿಗೆ ಹಾಗೂ ಸಾಮಾನ್ಯ ವರ್ಗಕ್ಕೆ ಹೆಚ್ಚುನ ಅನುದಾನವನ್ನು ನೀಡಿದೆ. ಕೃಷಿ, ಮಹಿಳಾ, ಕೈಗಾರಿಕೆ, ರೈಲ್ವೆ, ಹೀಗೆ ಅನೇಕ ಕ್ಷೇತ್ರಗಳಿಗೆ ಭರಪೂರ ಅನುದಾನ ಹಾಗೂ ಯೋಜನೆಯಲ್ಲಿ ನೀಡಿದೆ. ಇದರ ಜತೆಗೆ ತಂತ್ರಜ್ಞಾನಕ್ಕೂ ಹೆಚ್ಚು ವಿನಾಯಿತಿಗಳನ್ನು ನೀಡಿದೆ. ಈ ಬಗ್ಗೆ ಬಜೆಟ್ ಭಾಷಣದಲ್ಲಿ ಮಾತನಾಡಿದ ಸಚಿವೆ ನಿರ್ಮಾಲ ಸೀತಾರಾಮನ್ ಅವರು,
ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ಕಳೆದ ಆರು ವರ್ಷಗಳಲ್ಲಿ ಮೊಬೈಲ್ ಫೋನ್‌ಗಳ ರಫ್ತಿನಲ್ಲಿ ಸುಮಾರು 100 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಹಾಗೂ ಭಾರತೀಯ ಮೊಬೈಲ್ ಉದ್ಯಮವು ಪ್ರಬುದ್ಧವಾಗಿದೆ. ಅದಕ್ಕಾಗಿ ಗ್ರಾಹಕರ ಹಿತದೃಷ್ಟಿಯಿಂದ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿ (ಬೇಸಿಕ್ ಕಸ್ಟಮ್ಸ್ ಡ್ಯೂಟಿ) ಅನ್ನು 15% ಕ್ಕೆ ಇಳಿಸಲು ಮುಂದಾಗಿದ್ದೇವೆ ಹಾಗೂ ಈ ಬಗ್ಗೆ ಪ್ರಸ್ತಾವನೆಯನ್ನು ನೀಡಲಾಗಿದೆ ಎಂದರು.