ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ: ಡಿಕೆ ಶಿವಕುಮಾರ್

Share to all

ಬೆಂಗಳೂರು : ಮನಗರ ಹೆಸರು ಬದಲಾವಣೆ ವಿಚಾರಲ್ಲಿ ಮತ್ತೆ ಡಿಕೆಶಿ ಹಾಗು ಹೆಚ್ಡಿಕೆ ನಡುವೆ ಕೋಲ್ಡ್ ವಾರ್ ಶುರುವಾಗಿದೆ.ರಾಜ್ಯ ರಾಜಕಾರಣದ ಮದಗಜಗಳ ನಡುವೆ ಶುರುವಾಗಿರುವ ಟಾಕ್ ವಾರ್ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಸಜ್ಜಾಗ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಿರುವ ಹೆಸರನ್ನು ಮತ್ತೆ ರಾಮನಗರ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸಚಿವ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗುತ್ತಾರೆ ಎಂಬ ಕುಮಾರಸ್ವಾಮಿ ‌ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು,

ಕುಮಾರಸ್ವಾಮಿ ಯಾವಾಗಲೂ ಸರ್ವನಾಶದ ರಾಜಕಾರಣ ಮಾಡಿಕೊಂಡೇ ಬರುತ್ತಿದ್ದಾರೆ. ನಾವು ಒಳ್ಳೆಯದು ಮಾಡಿದರೂ ಅವರು ಸರ್ವನಾಶ ಮಾಡುವುದನ್ನು ಬಯಸಿಕೊಂಡು ಬಂದಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಆಚಾರ ವಿಚಾರ ಎಲ್ಲವೂ ಕೂಡಾ ನಮಗೆ ಅರಿವಿದೆ ಅಂತ ಕಿಡಿಕಾರಿದರು.

2028 ಕ್ಕೆ ರಾಮನಗರ ಹೆಸರು ಬದಲಾವಣೆ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸವಾಲ್ ಹಾಕಿದ ಡಿಕೆಶಿವಕುಮಾರ್ 2028ಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡುವುದು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ. 2028 ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಲಿದೆ ಬರೆದಿಟ್ಟುಕೊಳ್ಳಿ ಅಂತ ಸವಾಲ್ ಹಾಕಿದರು.

 


Share to all

You May Also Like

More From Author