ಕಾಲ ಬದಲಾಗಿದೆ ಮರ್ರೆ. ಪ್ರಸಕ್ತ ದಿನಗಳಲ್ಲಿ ಮೊಬೈಲ್ ಹುಚ್ಚು ಎಷ್ಟರ ಮಟ್ಟಿಗೆ ಹಿಡಿದಿದೆ ಎಲ್ಲರಿಗೂ ಗೊತ್ತೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಒಂದು ಹೊತ್ತು ಊಟ ಬಿಟ್ಟರು ಮೊಬೈಲ್ ಮಾತ್ರ ಬಿಡಲು ಸಾಧ್ಯವೇ ಇಲ್ಲ ಎಂಬ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಇನ್ನೂ ಮೊಬೈಲ್ ಬಳಕೆ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲ. ಪೋಷಕರು ತಮ್ಮ ಪುಟ್ಟ ಮಕ್ಕಳ ಕೈಗೆ ಮೊಬೈಲ್ ಕೊಡೋ ಮುನ್ನ ಸಾವಿರ ಸಲ ಯೋಚನೆ ಮಾಡಿ. ಅವರು ಮೊಬೈಲ್ ನಲ್ಲಿ ಏನು ನೋಡ್ತಿದ್ದಾರೆ ಎಲ್ಲವನ್ನೂ ವಿಚಾರಿಸಬೇಕು. ಇಲ್ಲಾಂದ್ರೆ ನಿಮ್ಮ ಮಕ್ಕಳು ದಾರಿ ತಪ್ಪೋದು ಗ್ಯಾರಂಟಿ. ಇಲ್ಲೊಬ್ಬ ಅಪ್ರಾಪ್ತ ಬಾಲಕ ಇದೆ ರೀತಿ ಎಡವಟ್ಟು ಮಾಡಿಕೊಂಡಿದ್ದಾನೆ. ಏನದು ಸ್ಟೋರಿ ಅಂತೀರಾ ಈ ಸುದ್ದಿ ಪೂರ್ತಿ ಓದಿ.
ಹೌದು ತಂಗಿಯನ್ನೇ ರೇಪ್ ಮಾಡಿ ಅಪ್ರಾಪ್ತ ಅಣ್ಣ ಕೊಲೆ ಮಾಡಿದ ಘಟನೆ ನಡೆದಿದ್ದು, ಇನ್ನೂ ಅಪರಾಧ ಮರೆಮಾಚಲು ತಾಯಿ ಬೆಂಬಲ ನೀಡಿದ್ದಾರೆ.
ಪ್ರಕರಣದಲ್ಲಿ ಈ ಕೃತ್ಯ ಮರೆ ಮಾಚಲು ಆತನ ತಾಯಿಯೇ ಸಹಾಯ ಮಾಡಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. 13 ವರ್ಷದ ಬಾಲಕನೊಬ್ಬ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋವನ್ನು ನೋಡಿ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದ ಬಳಿಕ ಆಕೆ ಈ ವಿಚಾರವನ್ನು ಎಲ್ಲಾದರೂ ಬಾಯಿಬಿಟ್ಟಾಳು ಎನ್ನುವ ಭಯದಿಂದ ಆಕೆಯನ್ನು ಹತ್ಯೆ ಮಾಡಿದ್ದ.
ಈ ಘಟನೆಯನ್ನು ಮುಚ್ಚಿಡಲು ಆತನ ತಾಯಿ ಹಾಗೂ ಸಹೋದರಿ ಸಹಾಯ ಮಾಡಿದ್ದರು ಎಂದು ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು 50 ಜನರ ವಿಚಾರಣೆ ನಡೆಸಿದ್ದಾರೆ, ಕೆಲವು ಸಾಕ್ಷ್ಯಾಧಾರ ಆಧಾರದ ಮೇಲೆ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 24ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ 9 ವರ್ಷದ ಅಪ್ರಾಪ್ತ ಬಾಲಕಿಯ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ತಿಳಿದುಬಂದಿತ್ತು.ಕುಟುಂಬ ಸದಸ್ಯರ ತೀವ್ರ ವಿಚಾರಣೆ ಬಳಿಕ ಸಂತ್ರಸ್ತೆಯ 13 ವರ್ಷದ ಸಹೋದರ ರಾತ್ರಿ ಆಕೆಯ ಪಕ್ಕದಲ್ಲಿ ಮಲಗಿದ್ದ, ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ್ದಾನೆ, ಬಳಿಕ ಕೃತ್ಯ ಎಸಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.