ಮದ್ಯ ಪ್ರಿಯರಿಗೆ ಶಾಕ್: ಬಿಯರ್ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ..!

Share to all

ಬೆಂಗಳೂರು: ನೀವೇನಾದ್ರು ಮದ್ಯ ಪ್ರಿಯರಾ .. ಹಾಗಾದ್ರೆ ನೀವು ಈ ಸ್ಟೋರಿ ನೋಡಲೆ ಬೇಕು.. ಕಳೆದ ಒಂದು ವರ್ಷದ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಫೆಬ್ರವರಿಯಲ್ಲಿ ಮೊದಲ ಶಾಕ್ ನೀಡಿತ್ತು, ಈಗ ಬಿಯರ್ ಕಂಪನಿಗಳು ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿವೆ…ಕೆಲವು ದಿನಗಳ ಹಿಂದೆಯಷ್ಟೇ ಇಂಧನದ ಬೆಲೆ ಲೀಟರ್ ಒಂದಕ್ಕೆ ಮೂರು ರೂಪಾಯಿ ಜಾಸ್ತಿಯಾಗಿತ್ತು. ಇದಾದ ನಂತರ, ಹಾಲಿನ ಪ್ರಮಾಣವನ್ನು ಹೆಚ್ಚಿಸಿ ಬೆಲೆಯನ್ನು ಜಾಸ್ತಿ ಮಾಡಲಾಗಿತ್ತು. ಈಗ, ಮದ್ಯದ ಬೆಲೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಜಾಸ್ತಿಯಾಗಿದೆ..

ಒಂದು ತಿಂಗಳ ಹಿಂದೆಯಷ್ಟೇ ಬಿಯರ್ ಬೆಲೆಯನ್ನು ಏರಿಕೆಯಾಗಿತ್ತು, ಈಗ ಮತ್ತೆ ಬಿಯರ್ ಪ್ರಿಯರಿಗೆ ಬಿಸಿತಟ್ಟಿದೆ. ಕೆಲವೊಂದು ಬ್ರ್ಯಾಂಡ್ ಗಳ ಬೆಲೆ ಕಮ್ಮಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ, ಬೆಲೆ ಏರಿಕೆ ಶಾಕ್ ನೀಡಿದೆ.ಬಿಯರ್ ಬೆಲೆ ಬಾಟಲ್ ವೊಂದಕ್ಕೆ ಆಯಾಯ ಬ್ರ್ಯಾಂಡ್ ಆಧರಿಸಿ ಐದರಿಂದ ಇಪ್ಪತ್ತು ರೂಪಾಯಿವರೆಗೆ ಏರಿಕೆಯಾಗಿದೆ. ಕೆಲವೊಂದು ಕಡೆ, ಕಳೆದ ವಾರದಿಂದಲೇ ಪರಿಷ್ಕೃತ ದರವನ್ನು ಗ್ರಾಹಕರಿಂದ ತೆಗೆದುಕೊಳ್ಳಲಾಗಿದೆ. ಹೊಸ ದರ  ಇಂದಿನಿಂದಲೇ ಜಾರಿಗೆ ಬರಬಹುದು..

ಪಂಚ ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಸುಮಾರು 56 ಸಾವಿರ ಕೋಟಿ ರೂಪಾಯಿಯನ್ನು ಹೊಂದಿಸುವ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ. ಬಿಯರ್ ಮೇಲೆ ಶೇ. 20 ಸುಂಕವನ್ನು ವಿಧಿಸಿತ್ತು. ಈ ಹಿನ್ನಲೆಯಲ್ಲಿ, ಮದ್ಯ ತಯಾರಿಕಾ ಕಂಪೆನಿಗಳು ಬಾಟಲ್ ವೊಂದರ ದರವನ್ನೂ ಹೆಚ್ಚಿಸಿತ್ತು.ಆದರೆ ಇದೀಗ ಮತ್ತೊಮ್ಮೆ ಬೆಲೆ ಏರಿಕೆಗೆ ಮದ್ಯ ಪ್ರಿಯರು ಹಿಡಿ ಶಾಪ ಹಾಕ್ತಿದ್ದಾರೆ.


Share to all

You May Also Like

More From Author