ಸುಳ್ಳು ದೂರು ನೀಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದವ ಕೊನೆಗೂ ಅಂದರ್!

Share to all

ಬೆಂಗಳೂರು:- ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಐನಾತಿ ಕಿಲಾಡಿ ಯುವಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತ ಅಂತಿಂತವನಲ್ಲ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಇದೀಗ ಕಂಬಿ ಎಣಿಸುತ್ತಿದ್ದಾನೆ. ಹೌದು, ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರಿಗೇ ಬ್ಲಾಕ್ ಮೇಲ್ ಮಾಡ್ತಿದ್ದ ಖತರ್ನಾಕ್ ಆಸಾಮಿಯನ್ನು ಅರೆಸ್ಟ್ ಮಾಡಲಾಗಿದೆ.

ಶಿವಾಜಿನಗರ ಠಾಣೆ ಪೊಲೀಸರಿಂದ ಆರೋಪಿ ಸೈಯದ್ ಸರ್ಫರಾಜ್ ಅಹಮದ್​ನನ್ನು ಬಂಧಿಸಲಾಗಿದೆ. ಆರೋಪಿ ಸೈಯದ್, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ. ಪೊಲೀಸ್ ಠಾಣೆಯಲ್ಲಿದ್ದ ಆರೋಪಿಗಳ ವಿಚಾರವಾಗಿ ಆರೋಪಿಗಳ ಪರ ಮಾನವ ಹಕ್ಕುಗಳ ಆಯೋಗಕ್ಕೆ ದೂರು‌ ನೀಡ್ತೀನಿ. ಹಾಕಿರೋ ಕೇಸ್ ವಾಪಾಸ್ ಪಡೆಯುವಂತೆ ಬ್ಲಾಕ್ ಮೇಲ್ ಮಾಡ್ತಿದ್ದ. ಇದೇ ರೀತಿ ಬ್ಲಾಕ್ ಮೇಲ್ ಮಾಡಲು ಹೋಗಿ ಶಿವಾಜಿನಗರ ಪೊಲೀಸರ ಬಳಿ ಲಾಕ್ ಆಗಿದ್ದಾನೆ.

​​ಆರೋಪಿ ಸೈಯದ್ ಸರ್ಪರಾಜ್, ಮೊದಲಿಗೆ ಪೊಲೀಸ್ ಠಾಣೆಗೆ ಹೋಗಿ ಸಿಬ್ಬಂದಿ, ಅಧಿಕಾರಿಗಳ ಜೊತೆ ನಯವಾಗಿ ಮಾತಾಡಿ ಪರಿಚಯ ಮಾಡಿಕೊಳ್ಳುತ್ತಿದ್ದ. ಬಳಿಕ ಠಾಣೆಯ ಸೆಲ್ ಒಳಗೆ ಇರುವ ಆರೋಪಿಗಳನ್ನೂ ಮಾತಾಡಿಸಿ ಆರೋಪಿಗಳ ಬಳಿ ತನ್ನ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದ. ಬಳಿಕ ಆರೋಪಿಯ ವಿರುದ್ಧ ದಾಖಲಾದ ಕೇಸ್​ನ ಪೂರ್ವಪರ ತಿಳಿದುಕೊಂಡು ನೇರವಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡ್ತಿದ್ದ. ಆರೋಪಿಯನ್ನು ಕಾನೂನು‌ ಬಾಹಿರವಾಗಿ ಪೊಲೀಸರು ಅಭಿರಕ್ಷೆಯಲ್ಲಿ ಇಟ್ಟುಕೊಂಡಿದ್ದಾರೆಂದು ಸುಳ್ಳು ದೂರು ನೀಡುತ್ತಿದ್ದ. ಬಳಿಕ ಈ ದೂರು ಹಿಂಪಡೆಯುವ ಸಲುವಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದ. ಹೀಗೆ ಅನೇಕ ಪೊಲೀಸ್ ಠಾಣೆಗಳಲ್ಲಿ ಕಿಲಾಡಿತನ ತೋರಿ ಆರೋಪಿ ಸೈಯದ್ ಹಣ ವಸೂಲಿ ಮಾಡಿದ್ದಾನೆ.

ಸದ್ಯ ಇದೇ ರೀತಿ ಶಿವಾಜಿನಗರ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ ಸರ್ಫರಾಜ್ ಠಾಣೆಗೆ ಬಂದು ಪೊಲೀಸ್ ಇನ್ಸ್ಪೆಕ್ಟರ್ ಬಳಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ. ಕೇಸ್ ವಾಪಸ್ ಪಡೆಯುವುದಕ್ಕೆ ಹಣ ನೀಡಿ ಎಂದು ಬ್ಲಾಕ್ ಮೇಲ್ ಮಾಡಿದ್ದ. ಅದರಂತೆ 25 ಸಾವಿರ ಹಣ ಕೊಡುವುದಾಗಿ ಕರೆಸಿ ಆರೋಪಿಯನ್ನು ಪೊಲೀಸರು ಲಾಕ್ ಮಾಡಲು ಪ್ರಯತ್ನಿಸಿದ್ದರು. ಆದರೆ ಈ ವೇಳೆ ಪೊಲೀಸರನ್ನ ಯಾಮಾರಿಸಿ ಆರೋಪಿ ಸೈಯದ್ ಸರ್ಫರಾಜ್ ಎಸ್ಕೇಪ್ ಆಗಿದ್ದು ಸದ್ಯ ಈಗ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೇ ಮತ್ತಷ್ಟು ತನಿಖೆಯನ್ನು ಚುರುಕು ಮಾಡಿದ್ದಾರೆ.


Share to all

You May Also Like

More From Author