ಮಂಡ್ಯ : ಮಂಡ್ಯದಲ್ಲಿ ಬೆಳ್ಳಂಬೆಳ್ಳಿಗ್ಗೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಮುತ್ತುರಾಜು ಅಲಿಯಾಸ್ ಡಕ್ಕ ಎಂಬಾತ ಮೇಲೆ ಫೈರಿಂಗ್ ಮಾಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನ ಹಿಡಿಯಲು ಹೋದಾಗ ಪೊಲೀಸ್ ಪೇದೆ ಸಿದ್ದರಾಜು ಎಂಬಾತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಕ್ಕಾಗಿ, ಫೈರಿಂಗ್ ಮಾಡಲಾಗಿದೆ.
ಮುತ್ತುರಾಜ ಅಲಿಯಾಸ್ ಡಕ್ಕ 11 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮೂರು ಕೊಲೆ, ಮೂರು ಕೊಲೆಗೆ ಯತ್ನ, ಎರಡು ರಾಬರಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಹುಡುಗರ ಗುಂಪು ಕಟ್ಟಿಕೊಂಡು ರೌಡಿ ಚಟುವಟಿಕೆಗಳಲ್ಲಿ ಡಕ್ಕ ಭಾಗಿಯಾಗಿದ್ದಾನೆ. 2019ರಿಂದ ರೌಡಿ ಕೃತ್ಯಗಳ ಮೂಲಕ ಹವಾ ಮೇಂಟೇನ್ ಮಾಡುತ್ತಿದ್ದನು. ಆರೋಪಿ ಮುತ್ತುರಾಜ ಅಲಿಯಾಸ್ ಡಕ್ಕ ಇಸ್ಪೀಟ್ ದಂಧೆ ಕೂಡ ನಡೆಸುತ್ತಿದ್ದನು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಡಕ್ಕ ಗ್ಯಾಂಗ್ಗೂ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದರು.