ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಗೌಪ್ಯ ಸಭೆ.ಮತ್ತೆ ಬಿಜೆಪಿಯಲ್ಲಿ ಭಿನ್ನಮತ.ತೀವ್ರ ಕುತೂಹಲ ಮೂಡಿಸಿದ ಮೀಟಿಂಗ್.
ಬೆಳಗಾವಿ:-ರಾಜ್ಯ ಬಿಜೆಪಿ ಅದ್ಯಕ್ಷ ಬಿ ವಾಯ್ ವಿಜಯೇಂದ್ರ ವಿರುದ್ದ ಬಣ ಎನ್ನಲಾದ ಬಿಜೆಪಿಯ ಒಂದು ಟೀಂ ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಗೌಪ್ಯ ಸಭೆ ನಡೆಸಿದೆ.
ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ.ಕುಮಾರ ಬಂಗಾರಪ್ಪ.ಜಿ ಎಂ.ಸಿದ್ದೇಶ.ಅರವಿಂದ ಲಿಂಬಾವಳಿ.ರಮೇಶ ಜಾರಕಿಗೊಳಿ.ಪ್ರತಾಪ ಸಿಂಹ.ಎನ್ ಆರ್ ಸಂತೋಷ ಹಾಗೂ ಅಣ್ಣಾಸಾಹೇಬ ಜೊಲ್ಲೆ ಸೇರಿ ಗೌಪ್ಯ ಸಭೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ವಿರುದ್ಧ ರೆಬೆಲ್ ಬಿಜೆಪಿ ನಾಯಕರು ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.ಸಭೆಯಲ್ಲಿ ಏನೇನು ಚರ್ಚೆ ಆಗಿದೆ ಎನ್ನುವುದು ಮಾತ್ರ ಗೌಪ್ಯ.