ಮೆಗಾಸ್ಟಾರ್ ಚಿರಂಜೀವಿ ನಟನೆ ಮುಂಬರುವ ಸಿನಿಮಾವೊಂದರಲ್ಲಿ ನಟಿಸುವುದಕ್ಕೆ ಶಾಸಕ ಪ್ರದೀಪ್ ಈಶ್ವರ್‌ಗೆ ಆ ಸಿನಿಮಾದ ನಿರ್ದೇಶಕರೇ ಆಫರ್ ಕೊಟ್ಟಿದ್ದಾರೆ. ಹೀಗಾಗಿ ನಟಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರದೀಪ್ ಈಶ್ವರ್ ಹಂಚಿಕೊಂಡಿದ್ದಾರೆ.
‘ನಾನು ಮೆಗಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಅವರ ಸಮುದಾಯದ ಏಕೈಕ ಶಾಸಕ ಕೂಡ ಆಗಿದ್ದೇನೆ. ಹೀಗಾಗಿ ನನ್ನ ಮೇಲೆ ಮೆಗಾಸ್ಟಾರ್ ಅವರಿಗೆ ವಿಶೇಷ ಪ್ರೀತಿಯಿದೆ. ನನಗೂ ಸಿನಿಮಾ ಇಂಡಸ್ಟ್ರಿಯವರು ಕ್ಲೋಸ್ ಆಗಿದ್ದಾರೆ. ಚಿರಂಜೀವಿ ಅವರೊಂದಿಗೆ ನಟಿಸಲು ಸಾಧ್ಯವಾದರೆ ಅದು ನನ್ನ ಭಾಗ್ಯ. ಅದನ್ನು ಸಿನಿಮಾ ತಂಡವೇ ಅನೌನ್ಸ್ ಮಾಡಲಿ ಎಂದು ಕಾಯುತ್ತಿದ್ದೇನೆ ಎಂದಿರುವ ಶಾಸಕ ಪ್ರದೀಪ್ ಈಶ್ವರ್.
ನನಗೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂಬುದು ಆಸೆ. ಒಂದು ಸಣ್ಣ ಸ್ಟೆಪ್ ಹಾಕಲು ಅವಕಾಶ ಸಿಕ್ರೂ ಅದು ನನ್ನ ಸೌಭಾಗ್ಯ. ನಾನು ರಾಜಕಾರಣದಲ್ಲಿ ಕೆಲವರನ್ನ ಡ್ಯಾನ್ಸ್ ಮಾಡಿಸಿದ್ದೀನಿ. ಆದರೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಿದ್ರೆ ಅದು ನನಗೆ ಖುಷಿ ಅಂತಾ ಪರೋಕ್ಷವಾಗಿ ಸಂಸದ ಸುಧಾಕರ್‌ಗೆ ಟಾಂಗ್ ಕೊಟ್ಟರು.