ಹಾಸನ:- ಇಲ್ಲಿನ ಸರ್ಕಾರಿ ಹಾಸ್ಟೆಲ್ ನಲ್ಲಿ ಹೇಳೋರು ಕೇಳೋರು ಯಾರು ಇಲ್ವಾ ಎಂಬ ಪ್ರಶ್ನೆ ಮೂಡಿದೆ. ವಸತಿ ನಿಲಯದ ಸಿಬ್ಬಂದಿ ಇಲ್ಲದ ವೇಳೆ ಮಕ್ಕಳು ಧೂಮಪಾನ, ವೈಟ್ನರ್ ಮತ್ತು ಮದ್ಯಪಾನ ಮಾಡುತ್ತಿದ್ದಾರೆ.
ಬೇಲೂರು ತಾಲೂಕಿನ ಬಿಕ್ಕೋಡಿನ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಘಟನೆ ಜರುಗಿದೆ.
4-5 ವೈಟ್ನರ್ ಮೂಸುತ್ತಿದ್ದರೇ, ಇನ್ನು ಕೆಲವರು ಧೂಮಪಾನ ಮಾಡುತ್ತಿದ್ದಾರೆ. ಮತ್ತು ವಸತಿ ನಿಲಯದ ಟೆರೆಸ್ ಮೇಲೆ ಮದ್ಯದ ಬಾಟಲಿಗಳು ಸಿಕ್ಕಿವೆ. ಇದು ಅಷ್ಟೇ ಅಲ್ಲದೆ ಮಕ್ಕಳು ಗಾಂಜಾ ಹಾಗೂ ಡ್ರಗ್ಸ್ ಕೂಡ ಸೇವನೆ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಸತಿ ನಿಲಯದಲ್ಲಿ ಮದ್ಯದ ಬಾಟಲ್, ಅಮಲೇರಿಸೊ ವಸ್ತುಗಳ ಕಂಡು ಸಾರ್ವಜನಿಕರು ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.