ರೇಣುಕಾಸ್ವಾಮಿ ಕೊಲೆ ಕೇಸ್: ಲೂಮಿನಲ್ ಟೆಸ್ಟ್ ನಲ್ಲಿ ಬಯಲಾಯ್ತು ಮತ್ತೊಂದು ಸ್ಫೋಟಕ ಸತ್ಯ!

Share to all

ನಟ ದರ್ಶನ್​ಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ಪ್ರಕರಣ ಕಂಟಕವಾಗಿದೆ. ಈಗಾಗಲೇ ಅವರು ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲ್​ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಅನಾರೋಗ್ಯ ಸಮಸ್ಯೆ ಕೂಡ ಕಾಡಿದೆ. ಈ ಮಧ್ಯೆ ಲೂಮಿನಲ್ ಟೆಸ್ಟ್ ನಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ಲೂಮಿನಲ್ ಟೆಸ್ಟ್ ನಲ್ಲಿ ದರ್ಶನ್ ಕ್ರೌರ್ಯದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು,

ರೇಣುಕಾಸ್ವಾಮಿ ಮೇಲಿನ ದರ್ಶನ್ ಕ್ರೌರ್ಯದ ವಿಷ್ಯ ದರ್ಶನ್ ವಿರುದ್ಧ ಮತ್ತೊಂದು ಸ್ಫೋಟಕ ಎವಿಡೆನ್ಸ್ ಪತ್ತೆಯಾಗಿದೆ. ಹಾಗಾದ್ರೆ ಲೂಮಿನಲ್ ಟೆಸ್ಟ್ ವೇಳೆ ಪತ್ತೆಯಾದ ಮತ್ತೊಂದು ಅಂಶ ಏನು..? ರೇಣುಕಾಸ್ವಾಮಿಯನ್ನ ಚಿತ್ರ ಹಿಂಸೆ ಕೊಟ್ಟು ಸಾಯಿಸಿರೋ ಡಿ ಗ್ಯಾಂಗ್ ಅದ್ರಲ್ಲಿ ದರ್ಶನ್ ನಿಂದಲೂ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟಿದ್ದ ಮಾಹಿತಿ ಲಭ್ಯವಾಗಿದೆ.

ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಮಾಡಿದ್ದ ದರ್ಶನ್ ಶೂಗಳನ್ನು ಮಿನಲ್ ಟೆಸ್ಟ್ ಗೆ ಕಳಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು. ಈ ವೇಳೆ ರೇಣುಕಾಸ್ವಾಮಿ ರಕ್ತದ ಕಲೆಗಳು ಶೂನಲ್ಲಿ ಪತ್ತೆಯಾಗಿದೆ.  ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾನೆ ಅನ್ನೋದಕ್ಕೆ ಮೂರನೇ ಮುಖ್ಯ ಎವಿಡೆನ್ಸ್ ಆಗಿದ್ದು, ಈ ಹಿಂದೆ ದರ್ಶನ್ ಟಿ ಶರ್ಟ್ ಮೇಲೂ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿತ್ತು ದರ್ಶನ್ ವಿರುದ್ಧ ಪ್ರಮುಖ ಎವಿಡೆನ್ಸ್ ಗಳಾದ ಧರಿಸಿದ್ದ ವಸ್ತುಗಳುರೇಣುಕಾಸ್ವಾಮಿ ರಕ್ತದ ಕಲೆಯಿಂದ ಮುಖ್ಯ ಎವಿಡೆನ್ಸ್ ಗಳಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.

ಹಾಗಾದ್ರೆ ದರ್ಶನ್ ಗೆ ಕಂಟಕವಾದ ವಸ್ತುಗಳಾವು..?

  • ಧರ್ಶನ್ ಧರಿಸಿದ್ದ ಟೀಶರ್ಟ್ ಮತ್ತು ಪ್ಯಾಂಟ್ ಪ್ರಮುಖ ಸಾಕ್ಷ್ಯ..
  •  ದರ್ಶನ್ ಟೀಶರ್ಟ್ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ..
  •  ಅಲ್ಲದೇ ದರ್ಶನ್ ಧರಿಸಿದ್ದ ಬೆಲ್ಟ್ ಕೂಡ ಪ್ರಮುಖ ಸಾಕ್ಷ್ಯ..
  • ಬೆಲ್ಟ್ ನಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಮಾಹಿತಿ..
  •  ಬೆಲ್ಟ್ ಅನ್ನ ಎವಿಡೆನ್ಸ್ ಆಗಿ ಪರಿಗಣಿಸಿರೋ ಪೊಲೀಸರು..
  •  ಈಗ ದರ್ಶನ್ ಶೂ ನಿಂದಲೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರೋದಕ್ಕೆ ಸಾಕ್ಷಿ..
  •  ಬೂಟಗಾಲಿಂದ ರೇಣುಕಾಸ್ವಾಮಿಗೆ ದರ್ಶನ್ ಒದ್ದು ಹಲ್ಲೆ ಮಾಡಿದ್ದ ಶಂಕೆ..
  •  ಅದಕ್ಕೆ ಪ್ರತಿಯಾಗಿ ಬೂಟಿನ ಮೇಲೆ ಪತ್ತೆಯಾಗಿರೋ ರಕ್ತದ ಕಲೆಗಳು.

Share to all

You May Also Like

More From Author