ಹುಬ್ಬಳ್ಳಿ.
ಸ್ಮಾಟ್೯ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಜನತಾ ಬಜಾರ ಬಿಲ್ಡಿಂಗ್ ಅನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಪರೀಶೀಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಜನತಾ ಬಜಾರದ ವ್ಯಾಪಾರಸ್ಥರು ಮೇಯರ್ ವಿರುದ್ಧ ಪ್ರತಿಭಟನೆ ನಡೆಸಿ ದೀಪಾವಳಿ ಹಬ್ಬದೊಳಗಾದರೂ ನಮಗೆ ಅರಾಮಾಗಿ ಕುಳಿತುಕೊಂಡು ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವೀಣಾ ಭರದ್ವಾಡ ಮುಂದಿನ ಜಿಬಿಯಲ್ಲಿ ಚರ್ಚೆ ಮಾಡ್ತೇವಿ ಚರ್ಚೆ ಮಾಡಿ ಅದಷ್ಟು ಬೇಗ ನಿಮಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡತೇವಿ ಎಂದರು.
ಆದರೆ ಅಲ್ಲಿಯ ವ್ಯಾಪಾರಸ್ಥರು ಮಾತ್ರ ಕಳೆದ ಮೂರು ವರ್ಷಗಳಿಂದ ಇದನ್ನೇ ಹೇಳತಿದ್ದಾರೆ ಬಿಡ್ರೀ ಇವರ ಇನ್ನೂ ಯಾವಾಗ ನಮಗೆ ಕೊಡತಾರ ಗೊತ್ತಿಲ್ಲ.ನಾವು ಸತ್ತ ಹೆಣದ ಮುಂದ ಕಾಯಕೋಂತ ಕುಂತಂಗ ಕುಂತೇವಿ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತರು ಮಾತ್ರ ಖಡಕ್ ಆಗಿ ಎಲ್ಲಾ ರೆಡಿ ಆಗಿದೆ.ಶಾಸಕರು ಸೇರಿದಂತೆ ಎಲ್ಲಾ ಸದಸ್ಯರುಗಳ ಜೊತೆ ಚರ್ಚೆ ಮಾಡಿ ಕೂಡಲೇ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಉದಯ ವಾರ್ತೆ ಹುಬ್ಬಳ್ಳಿ