ನಾನು ದರ್ಶನ್ʼನನ್ನು ಮದ್ವೆ ಆಗ್ತೀನಿ: ಬಳ್ಳಾರಿ ಜೈಲಿಗೆ ಬಂದ ಮಹಿಳಾ ಅಭಿಮಾನಿಯ ರಂಪಾಟ!

Share to all

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಫೋಟೋಗಳನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವು ವೈರಲ್ ಆಗುತ್ತಿವೆ.

ಇದರ ಬೆನ್ನಲ್ಲೇ ಮಹಿಳಾ ಅಭಿಮಾನಿ ಒಬ್ಬರು ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತೀನಿ, ನನಗೆ ದರ್ಶನ್ ಇಷ್ಟ ಎಂದು ಬಳ್ಳಾರಿ ಜೈಲು ಮುಂದೆ ರಂಪಾಟ ಮಾಡಿದ್ದಾರೆ.  ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿ ದರ್ಶನ್ ನೊಡಲೇಬೇಕು ಅಂತಾ ಬಳ್ಳಾರಿ ಸೆಂಟ್ರಲ್ ಜೈಲ್ ಬಳಿ ಬಂದಿದ್ದಾರೆ. ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಣ್ಣು ಹಂಪಲು, ಜೊತೆಗೆ ಆಧಾರ್​ ಕಾರ್ಡ್​ ಹಿಡಿದು ಬಂದಿದ್ದಾರೆ. ಈ ವೇಳೆ ಜೈಲು ಸಿಬ್ಬಂದಿ ಅವರನ್ನು ತಡೆದಿದ್ದಾರೆ.

ಮಾಧ್ಯಮದವರ ಮುಂದೆ ಮಾತನಾಡಿದ ಮಹಿಳಾ ಅಭಿಮಾನಿ,  ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತಿನಿ, ನನಗೆ ದರ್ಶನ್ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದೆ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ, ಹಣ್ಣು ಕೊಟ್ಟು ನೋಡಿ ಹೋಗುವೆ. ಚಿಕನ್​ ಬೇಕು ಎಂದರೆ ಮಾಡಿ ತರುವೆ ಎಂದು ಅಭಿಮಾನಿ ಲಕ್ಷ್ಮೀ ಪಟ್ಟು ಹಿಡಿದಿದ್ದಾರೆ. ದರ್ಶನ್ ಏನ್ ತಪ್ಪು ಮಾಡಿದ್ದಾರೆ. ಬೇಕು ಅಂತಾ ಬಳ್ಳಾರಿಗೆ ತಂದು ಹಾಕಿದ್ದಾರೆ ಅಂತಾ ಜೈಲು ಸಿಬ್ಬಂದಿ ಜೊತೆ ಲಕ್ಷ್ಮೀ ವಾಗ್ವಾದ ನಡೆಸಿದ್ದಾರೆ. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದಾಗ ನಾನು ಅವನನ್ನು ಮದುವೆ ಆಗೋದಕ್ಕೂ ರೆಡಿ ಎಂದಿದ್ದಾರೆ.


Share to all

You May Also Like

More From Author