ವಿಡಿಯೋ ಕಾಲ್ ಮಾಡಿ ಮಹಿಳೆಯರ ನಗ್ನ ದೇಹ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್: FIR ದಾಖಲು

Share to all

ಬೆಳಗಾವಿ:- ವಿಡಿಯೋ ಕಾಲ್​ ಮಾಡಿ, ಮಹಿಳೆಯರ ನಗ್ನ ದೇಹವನ್ನು ರೆಕಾರ್ಡ್​ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಿರುವ ಬಗ್ಗೆ ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ ಅಂತ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು. ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾತನಾಡಿ, ಹೊಸ ಮಾದರಿಯ ಸೈಬರ್ ಕ್ರೈಮ್ ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಮೇಲ್, ಮೆಸೇಜ್, ಕರೆ ಅಥವಾ ವಾಟ್ಸಪ್ ಮೂಲಕ ಒಂದು ಸಂದೇಶ ಬರುತ್ತೆ. ಕ್ರೈಮ್ ಬ್ರ್ಯಾಂಚ್​ದಿಂದ ಕರೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಒಂದು ಅಪರಾಧ ಪ್ರಕರಣದಲ್ಲಿ ನಿಮ್ಮ ಹೆಸರು ತಳಕು ಹಾಕಿಕೊಂಡಿದೆ ಎಂದು ಹೆದರಿಸುತ್ತಾರೆ. ಹೀಗಾಗಿ, ನೀವು ನಮ್ಮ ಹತ್ತಿರ ಬಂದು, ಯಾಕೆ ಈ ರೀತಿ ಮಾಡಿದೀರಿ ಅಂತ ವಿವರಣೆ ನೀಡಬೇಕೆಂದು ಹೆದರಿಸುತ್ತಾರೆ.

ನಾವೀಗ ನಿಮ್ಮನ್ನು ವಿಚಾರಣೆ ಮಾಡಬೇಕು ಕ್ಯಾಮೆರಾ ಮುಂದೆ ಬನ್ನಿ ಎಂದು ಹೇಳುತ್ತಾರೆ. ಒಂದು ವೇಳೆ ನೀವು ಈ ವಿಚಾರ ಹೊರಗಡೆ ಗೊತ್ತಾದರೆ ನಿಮ್ಮ ಅಪರಾಧದ ಬಗ್ಗೆ ನಿಮ್ಮ ಕುಟುಂಬದವರಿಗೆ ಹೇಳುತ್ತೇವೆ ಅಂತ ಹೆದರಿಸುತ್ತಾರೆ. ಹೇಗೆ ಅಪರಾಧ ಕೃತ್ಯ ಎಸಗಿದ್ದೀರಿ ಅಂಥ ನಿಮ್ಮ ದೇಹವನ್ನು ಪರಿಶೀಲಿಸಬೇಕು, ಹೀಗಾಗಿ ಬಟ್ಟೆ ಬಿಚ್ಚಿ ಅಂತ ಹೇಳುತ್ತಾರೆ. ನಂತರ, ಮಹಿಳೆಯರು ನಗ್ನವಾಗಿ ಕ್ಯಾಮೆರಾ ಮುಂದೆ ಬಂದಾಗ, ಸ್ಕ್ರೀನ್​ ರೆಕಾರ್ಡ್​ ಮಾಡಿಕೊಳ್ಳುತ್ತಾರೆ. ನಂತರ, ಈ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್​ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ, ಮಹಿಳೆಯರನ್ನು ನಂಬಿಸಿ ಹಣ ದೋಚುವ ಪ್ರಕರಣ ಬೆಳಗಿಗೆ ಬಂದಿವೆ. ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿವೆ ಎಂದು ಹೇಳಿಕೆ ಕೊಟ್ಟಿದ್ದಾರೆ.


Share to all

You May Also Like

More From Author