ರೇಣುಕಾಸ್ವಾಮಿ ಮೇಲೆ ಪೊಲೀಸ್ ಲಾಠಿಯಿಂದ ಹಲ್ಲೆ ಮಾಡಿದ್ದ ಡಿ-ಗ್ಯಾಂಗ್! ದರ್ಶನ್ ಕೈಗೆ ಲಾಠಿ ಸಿಕ್ಕಿದ್ದು ಹೇಗೆ ಗೊತ್ತಾ..?

Share to all

ನಟ ದರ್ಶನ್​ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಎ2 ಆಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್​ಶೀಟ್​ನಲ್ಲಿನ ವಿವರಗಳು ನಿಜಕ್ಕೂ ಶಾಕಿಂಗ್​ ಆಗಿವೆ. ಬಂದೋಬಸ್ತ್  ಗೆ ಬಂದಿದ್ದ ಪೋಲಿಸ್ ಪೇದೆಯ  ಲಾಠಿ.. ‘ಡೆತ್ ಡೇ’ಗೆ  ಉಪಯೋಗವಾಗಿದೆ.ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಬಳಸಿದ್ದ ಲಾಠಿ ಹಿಂದಿದೆ  ರೋಚಕ ಕತೆ.ಕಾನ್ಸ್​ಟೆಬಲ್​​ ಕರ್ತವ್ಯಲೋಪ ಹಿನ್ನಲೆ ಪೊಲೀಸ್ ಲಾಠಿ  D ಗ್ಯಾಂಗ್ ಕೈ ಸೇರಿದೆ. ಪಟ್ಟಣಗೆರೆ ಶೆಡ್​ಗೆ ಪೊಲೀಸ್ ಲಾಠಿ ಬಂದಿದ್ದು ಹೇಗೆ ಅನ್ನೋದು ರಿವಿಲ್ ಆಗಿದೆ.

ಫೆಬ್ರುವರಿ 16 ದರ್ಶನ್ ಬರ್ತಡೇ.  15ನೇ  ತಾರೀಕು ದರ್ಶನ್ ಮನೆಯ ಬಳಿ ಬಂದೋ ಬಸ್ತ್ ವೇಳೆ ಕಳೆದುಹೋದ ಲಾಠಿ ಜೂನ್ 11 ಪತ್ತೆಯಾಗಿದೆ. ಕಾನ್ಸ್​​ಟೇಬಲ್​ ರವೀಂದ್ರರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ.ಆಗಿದ್ದು ದರ್ಶನ್ ಬರ್ತ್​ ಡೇ ಹಿಂದಿನ ರಾತ್ರಿ ಬಂದೋಬಸ್ತ್​ ವೇಳೆ ಯಡವಟ್ಟು ಮಾಡಿಕೊಂಡಿದ್ರು.

ಮರದ ಬಳಿ ಇಟ್ಟು ಮರೆತು ಡ್ಯೂಟಿ ಮುಗಿಸಿ ಠಾಣೆಗೆ ಹೋಗಿದ್ದ ರವೀಂದ್ರ ಬೆಳಿಗ್ಗೆ ಬಂದು ನೋಡೋ ಹೊತ್ತಿಗೆ ಇಟ್ಟ ಜಾಗದಿಂದ ಲಾಠಿ ಮಾಯವಾಗಿತ್ತು.ಬರ್ತ್ ಡೇ ದಿನದಂದು ದರ್ಶನ್ ಮನೆ ಬಳಿ​ ಜನಸಾಗರ ಸೇರಿತ್ತು. ಜನ ಜಂಗುಳಿ ಮಧ್ಯೆ ಎಷ್ಟೇ ಹುಡುಕಿದ್ರು ಲಾಠಿ ಸಿಕ್ಕಿರ್ಲಿಲ್ಲ. ಇದೀಗ ರೇಣುಕಾಸ್ವಾಮಿ ಮೇಲಿನ ಹಲ್ಲೆಗೆ ಅದೇ ಲಾಠಿ ಬಳಕೆಯಾಗಿದೆ.

ಲಾಠಿಯನ್ನ  ತೆಗೆದಿಟ್ಟುಕೊಂಡಿದ್ದ ದರ್ಶನ್ ಹುಡುಗರು ಜೂನ್​ 8ರಂದು ಅದೇ ಪೊಲೀಸ್​ ಲಾಠಿಯಿಂದ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ದರ್ಶನ್ ಹಲ್ಲೆ ಮಾಡಿದ ರಭಸಕ್ಕೆ ಲಾಠಿಯೇ ಛಿದ್ರವಾಗಿದೆ.ಇದೀಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಲಾಠಿ ಸೀಜ್ ಆಗಿದ್ದು, ಪೊಲೀಸ್​ ಪೇದೆ ರವೀಂದ್ರಾಗೆ ಪೊಲೀಸ್​​ ನೋಟೀಸ್  ನೀಡಿ  ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಟೌನ್ ನಿಂದ ಪಟ್ಟಣಗೆರೆ ಶೆಡ್ ಗೆ ಲಾಠಿ  ತಂದಿದ್ದು ಯಾರು ಅನ್ನೋ ಅನುಮಾನ ಮೂಡಿದೆ. ಇನ್ನೇಷ್ಟು ಲಾಠಿ ಕದ್ದಿದ್ದಾರೋ ಅನ್ನೋ ಅನುಮಾನ ‌ಮೂಡಿದೆ..


Share to all

You May Also Like

More From Author