ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಕಳ್ಳತನ: ತನಿಖೆಗೆ ಸಚಿವ ಸಂತೋಷ ಲಾಡ್.
ಧಾರವಾಡ: ಕಾನೂನು ಬಾಹಿರವಾಗಿ ನವಲಗುಂದ ಪಟ್ಟಣದ ಮಣ್ಣು ತೆಗೆದಿರುವ ವಿಷಯವಾಗಿ ಸರಕಾರ ಸಂಬಂಧಿಸಿದ ಸಮಿತಿಯಿಂದ ತನಿಖೆ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಮಣ್ಣು ತೆಗೆದಿರುವ ಕುರಿತು ಕಾನೂನು ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಅವಶ್ಯವಿರುವ ತನಿಖೆ ಮಾಡುವ ಜೊತೆಗೆ ಸರಕಾರ ಉತ್ತರ ಕೊಡತ್ತೆ ಎಂದರು.
ಕಾಮಗಾರಿಗಳು ಟೆಂಡರ್ ಆಗಿದೆ ಎಂದು ತಿಳಿದುಕೊಂಡಿದ್ದ ಸಚಿವರಿಗೆ, ಮಾಧ್ಯಮದವರು ವಿವರಿಸಿದಾಗ ನನಗೆ ಈ ಬಗ್ಗೆ ಹೆಚ್ಚಿಗೆ ಮಾಹಿತಿ ಇಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದಿದ್ದಾರೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ನನ್ನ ಒಳ್ಳೆಯ ಸ್ನೇಹಿತರು. ರಾಜಕೀಯದಲ್ಲಿ ಆರೋಪ ಮಾಡುವುದು ತಪ್ಪಲ್ಲ ಎಂದರು.