ಕೇಂದ್ರದ ಕಾಂಗ್ರೆಸ್ ನಾಯಕರ ವಿರುದ್ಧ ವಿವಾದಾತ್ಮಕ ಪೋಸ್ಟ್: ಬಾಂಗ್ಲಾದೇಶ ಪ್ರಜೆ ವಿರುದ್ಧ ಪ್ರಕರಣ ದಾಖಲು!

Share to all

ಬೆಂಗಳೂರು:- ಕೇಂದ್ರದ ಕಾಂಗ್ರೆಸ್ ನಾಯಕರ ವಿರುದ್ಧ ವಿವಾದಾತ್ಮಕ ಪೋಸ್ಟ್ ಹಾಕಿದ ಹಿನ್ನೆಲೆ ಬಾಂಗ್ಲಾದೇಶ ಪ್ರಜೆ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಆರೋಪದಲ್ಲಿ ಬೆಂಗಳೂರಿನಲ್ಲಿ ಬಾಂಗ್ಲಾದೇಶ ಪ್ರಜೆ ಸಲಾಲುದ್ದೀನ್ ಸುಹೇಬ್ ಚೌಧರಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಸಲಾಲುದ್ದೀನ್ ಸುಹೇಬ್, ಪಾಕಿಸ್ತಾನಿ ಐಎಸ್​ ಏಜೆಂಟ್ ರೀತಿ ಬಿಂಬಿಸಿ ಪೋಸ್ಟ್ ಹಾಕಿದ್ದ. ಹೀಗಾಗಿ ಕೋಮು ಸೌಹಾರ್ದತೆಗೆ ಧಕ್ಕೆ, ಶಾಂತಿ ಕದಡುವ ಪ್ರಯತ್ನಿಸಿದ ಆರೋಪದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ.

ಸೋನಿಯಾಗಾಂಧಿ ಅಂತರ್ ಧರ್ಮ ವಿವಾಹವಾಗಿದ್ದಾರೆ. ಅವರು ಕ್ರಿಶ್ಚಿಯನ್ ಧರ್ಮವನ್ನೇ ಪಾಲನೆ ಮಾಡುತ್ತಿದ್ದಾರೆ. ಅಂತರ್ ಧರ್ಮದಲ್ಲಿ‌ ಮದುವೆಯಾಗಿ ಭಾರತದ ಪೌರತ್ವ ಪಡೆದಿದ್ದಾರೆ’’ ಎಂದು ಸಲಾಲುದ್ದೀನ್ ಸುಹೇಬ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ.

ಇಷ್ಟೇ ಅಲ್ಲದೆ, ‘‘ರಾಹುಲ್ ಗಾಂಧಿ ವಿದೇಶಿ ಸ್ನೇಹಿತರ ಜೊತೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ’’ ಎಂದು ಪೋಸ್ಟ್ ಮಾಡಿದ್ದ ಎನ್ನಲಾಗಿದೆ.


Share to all

You May Also Like

More From Author