*ಕಪ್ಪತ್ತಗುಡ್ಡ ಪ್ರಾಧಿಕಾರ ರಚನೆ ಹಾಗೂ,ಕಳಸಾ-ಬಂಡೂರಿಗಾಗಿ ಪಾದಯಾತ್ರೆ..ಸಜ್ಜುಗೊಂಡ ಮಂಜುನಾಥ ಲೂತಿಮಠ ಟೀಂ..ಹುಬ್ಬಳ್ಳಿಯಿಂದ ಸಾವಿರಾರು ಕಾರ್ಯಕರ್ತರು..
ಹುಬ್ಬಳ್ಳಿ:- ಕಪ್ಪತ್ತಗುಡ್ಡ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಹಾಗೂ ಕಳಸಾ-ಬಂಡೂರಿ ನಾಲಾ ಜೋಡಣೆಗೆ ಒತ್ತಾಯಿಸಿ ನರಗುಂದದಿಂದ ಗದಗವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಹಮ್ಮಿಕೊಂಡಿರುವ ಪಾದಯಾತ್ರೆಗೆ ಹುಬ್ಬಳ್ಳಿ ಟೀಂ ರೆಡಿಯಾಗಿದೆ..
ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮುಖಂಡತ್ವದಲ್ಲಿ ರಾಜ್ಯ ಸಮಿತಿ ಹಾಗೂ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ವಿಭಾಗದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಹಮ್ಮಿಕೊಂಡಂತಹ ಕಳಸಾ ಬಂಡೂರಿ ಮಹಾದಾಯಿ ನಾಲೆಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ 19/09/2024 ರಿಂದ 20/09/2024 ರವರೆಗೆ ನರಗುಂದದಿಂದ ಗದಗ ವರಗೆ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಹೋರಾಟದ ಪೂರ್ವಭಾವಿ ಸಭೆಯನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಲಾಯಿತು.
ಈ ಪೂರ್ವಭಾವಿ ಸಭೆಯಲ್ಲಿ ಹೋರಾಟದ ರೂಪ ರೇಷಗಳನ್ನು ಚರ್ಚಿಸಲಾಯಿತು. ಈ ಹೋರಾಟಕ್ಕೆ ಧಾರವಾಡ, ಗದಗ್ ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಸುಮಾರು 1,500ಕ್ಕಿಂತಲೂ ಹೆಚ್ಚು ಜನ ಕರವೇ ಕಾರ್ಯಕರ್ತರು ಪಾಲ್ಗೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.
19/ 9/ 2024 ರಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಷದ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅವರಿಂದ ಹಾಗೂ ರಾಜ್ಯ ಪದಾರ್ಥಗಳಿಂದ ಹುಬ್ಬಳ್ಳಿಯ ರಾಣಿ ಚೆನ್ನಮ್ಮಾಜಿ, ವೀರ ಸಂಗೊಳ್ಳಿ ರಾಯಣ್ಣ, ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಸುಮಾರು 100 ಜನ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಭಾಗವಹಿಸಲಿದ್ದಾರೆ, ನಂತರ 50 ಆಟೋ, 100 ಬೈಕುಗಳು, 25 ಇತರೆ ವಾಹನಗಳ ರ್ಯಾಲಿ ಮಾಡಿಕೊಂಡು ನರಗುಂದದ ಪಾದಯಾತ್ರೆಯ ಹೋರಾಟ ಸ್ಥಳಕ್ಕೆ ಹೋಗುವುದಾಗಿ ತೀರ್ಮಾನಿಸಲಾಯಿತು.
ತದನಂತರ ನರಗುಂದದಿಂದ ಎರಡು ದಿನಗಳ ಪಾದಯಾತ್ರೆ ಆರಂಭಿಸಿ ಗದಗ ಜಿಲ್ಲೆ ಹಾಗೂ ತಾಲೂಕಾ ಹಾಗೂ ಗ್ರಾಮಗಳಾದ್ಯಂತ ಹೋರಾಟದ ಜಾಗೃತಿ ಮೂಡಿಸಿ ಅಂದಾಜು 48 ಕಿ.ಮೀಗಳ ಪಾದಯಾತ್ರೆ ಮೂಲಕ ಗದಗಿನ ಜಿಲ್ಲಾಧಿಕಾರಿಗಳು ಹಾಗೂ ಸಚಿವರಾದ ಶ್ರೀ ಎಚ್ ಕೆ ಪಾಟೀಲ ಅವರಿಗೆ ಮೇಲ್ಕಂಡ ವಿಷಯವಾಗಿ ಮನವಿ ಕೊಡುವ ಯೋಜನೆ ನೀಡಲಾಯಿತು.
ಈ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ದಾವಲಸಾಬ ಮುಳಗುಂದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಪಾಪು ಧಾರೆ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಲೂತಿಮಠ ಗದಗ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಬೇಲೂರ
ಹಾವೇರಿ ಜಿಲ್ಲಾ ಅಧ್ಯಕ್ಷರಾದ ಹನುಮಂತ ಭೋವಿ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು, ಕುಂದಗೋಳ ಧಾರವಾಡ ಕಲಘಟಗಿ ಬ್ಯಾಡಗಿ ಹಾವೇರಿ ಹಿರೇಕೆರೂರ ಮುಧೋಳ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಗದಗ್ ಮತ್ತು ಧಾರವಾಡ ಬಾಗಲಕೋಟೆ ಹಾವೇರಿ ಬೆಳಗಾವಿ ಜಿಲ್ಲೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.