ಪ್ಲೈ ಓವರ್ ಕಬ್ಬಣ ಬಾರ್ ಬಿದ್ದು ಎಎಸ್ಐ ಸಾವು ಪ್ರಕರಣ..ಹನ್ನೊಂದು ಜನರ ಬಂಧನ.ಇನ್ನೊಂದಿಷ್ಟು ಜನ ಬಂಧನವಾಗಬೇಕಿದೆ.ಪೋಲೀಸ ಪ್ರಕಟಣೆ.
ಹುಬ್ಬಳ್ಳಿ:- ಪ್ಲೈ ಓವರ್ ಮೇಲಿಂದ ಕಬ್ಬಣದ ಬಾರ್ ಬಿದ್ದು ಎ ಎಸ್ಐ ನಾಭಿರಾಜ ದಯಣ್ಣವರ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಜನರನ್ನ ಹುಬ್ಬಳ್ಳಿ ಉಪನಗರ ಪೋಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹರ್ಷಾ ಹೊಸಗಾಣಿಗೇರ..ಜಿತೇಂದ್ರಪಾಲ..ಭೂಪೇಂದ್ರ,.ಮೊಹಮ್ಮದ ಸೇರಿದಂತೆ ಹನ್ನೊಂದು ಜನರನ್ನು ಬಂಧಿಸಿದ್ದಾರೆ ಇನ್ನೂ ಕೆಲವರನ್ನು ಬಂಧಿಸಬೇಕಿದೆ ಎಂದು ಉಪನಗರ ಪೋಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ಲೈಓವರ್ ಕಾಮಗಾರಿಯನ್ನು ಮಾಡುತ್ತಿರುವ ಝಂಡು ಕನ್ಸಟ್ರಕ್ಸನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾಕ್ರಮ ಕೈಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ಅಲ್ಲಿಯ ನೌಕರರ ನಿರ್ಲಕ್ಷ್ಯವೇ ಎಎಸ್ಐ ಸಾವಿಗೆ ಕಾರಣ ಎಂದು ಕಂಪನಿಯ ಮೇಲೆ ದೂರು ದಾಖಲು ಮಾಡಿಕೊಂಡು ಹಲವರನ್ನ ಬಂಧಿಸಲಾಗಿದೆ.