Yashasvi Jaiswal: 147 ವರ್ಷಗಳಲ್ಲೇ ಮೊದಲ ಬಾರಿ ಈ ಐತಿಹಾಸಿಕ ದಾಖಲೆ ಮಾಡಿದ ಜೈಸ್ವಾಲ್!

Share to all

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಅದರಲ್ಲೂ ತವರು ನೆಲದಲ್ಲಿ ತಮ್ಮ ಮೊದಲ 10 ಇನ್ನಿಂಗ್ಸ್‌ಗಳಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ  ಯಶಸ್ವಿ ಜೈಸ್ವಾಲ್‌ ಪಾತ್ರರಾಗಿದ್ದಾರೆ. ಹೌದು ಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಎದುರಿಸಿದ 118 ಎಸೆತಗಳಲ್ಲಿ 9 ಫೋರ್‌ಗಳ ಬಲದೊಂದಿಗೆ 56 ರನ್‌ ಬಾರಿಸಿದ ಜೈಸ್ವಾಲ್‌,

ಇದೇ ವೇಳೆ ತಮ್ಮ ಟೆಸ್ಟ್‌ ಕೆರಿಯರ್‌ನಲ್ಲಿ 750 ರನ್‌ಗಳ ಗಡಿ ದಾಟಿದರು. ಅಂದಹಾಗೆ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ 10 ಇನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆ ಈ ಮೊದಲು ವೆಸ್ಟ್‌ ಇಂಡೀಸ್‌ನ ಜಾರ್ಜ್‌ ಹೆಡ್ಲೀ ಅವರ ಹೆಸರಲ್ಲಿತ್ತು. ಅವರು 1935ರಲ್ಲಿ ವೆಸ್ಟ್‌ ಇಂಡೀಸ್‌ ಪರ ಆಡಿದ ಮೊದಲ 10 ಇನಿಂಗ್ಸ್‌ಗಳಲ್ಲಿ 747 ರನ್‌ಗಳನ್ನು ಬಾರಿಸಿದ್ದರು. ಒಂದು ಹೆಜ್ಜೆ ಮುಂದಿಟ್ಟಿರುವ ಯಶಸ್ವಿ ಜೈಸ್ವಾಲ್‌ 750 ರನ್‌ಗಳ ಗಡಿ ದಾಟಿ ಈ ಸಾಧನೆ ಮೆರೆದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ.

ಇದಲ್ಲದೆ ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಈ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಅಂದರೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಜೈಸ್ವಾಲ್ ಇದುವರೆಗೆ ಆಡಿರುವ 10 ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ 67.75 ಸರಾಸರಿಯಲ್ಲಿ 1084 ರನ್ ಗಳಿಸಿದ್ದಾರೆ.


Share to all

You May Also Like

More From Author