ಹುಬ್ಬಳ್ಳಿಯಲ್ಲಿ ಆ ಹೊಟೆಲ್ ನಲ್ಲಿ ನಶಾಲೋಕ ಅನಾವರಣ…ಎತ್ತ ಸಾಗುತ್ತಿದೆ ಡಿಜಿಟೆಲ್ ಯುಗ..
ಹುಬ್ಬಳ್ಳಿ:- ನೋಡಿ ಇದು ಹೇಳಿ ಕೇಳಿ ಛೋಟಾ ಮುಂಬೈ ಖ್ಯಾತಿ ಪಡೆದಿರುವ ವಾಣಿಜ್ಯ ನಗರಿ ಹುಬ್ಬಳ್ಳಿ. ಈ ಹುಬ್ಬಳ್ಳಿ ದಿನನಿತ್ಯ ಒಂದಿಲ್ಲಾ ಒಂದು ಸುದ್ದಿಯ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ.ಆದರೆ ಈಗ ನಾವು ತೋರಿಸ್ತಾ ಇರೋ ಸುದ್ದಿಇಲ್ಲಿರುವ ಈ ಪ್ರತಿಷ್ಠಿತ ಹೊಟೆಲದ್ದು.
ಇದು ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೆಲ್.ಹೊಟೆಲ್ ಹೊರಗೆ ನೋಡೋಕೆ ತುಂಬಾ ಸುಂದರವಾಗಿದೆ. ಒಂದು ಕ್ಷಣ ಹೊಟೆಲ್ ಗೆ ಬಂದವರು ವಾವ್ ಅನ್ನದೆ ಇರಲಾರರು..ರಾಜಧಾನಿ ಬೆಂಗಳೂರಿನಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿರೋ ಈ ಹೊಟೆಲ್
ಹುಬ್ಬಳ್ಳಿಯ ನವನಗರ ಬಳಿ ಇರೋ ಈ ಹೊಟೆಲ್ ನಲ್ಲಿ ಪ್ರತಿ ಶನಿವಾರ ರವಿವಾರ ನಡೆಯೋ ವೀಕೆಂಡ್ ಪಾರ್ಟಿ, ಗೋವಾ ಮುಂಬೈ ಬೆಂಗಳೂರು ಮೀರಿಸುವಂತಿದೆ.ಹೊರಗೆ ಶಾಂತವಾಗಿ ಕಾಣೋ ಈ ಹೊಟೆಲ್ ನಲ್ಲಿ ಶನಿವಾರ ರವಿವಾರ ಕತ್ತಲ ಲೋಕ ಅನಾವರಣ ಆಗತ್ತೆ.ವೀಕೆಂಡ್ ಪಾರ್ಟಿ ಹೆಸರಲ್ಲಿ ಮಾದಕಲೋಕ ಅನಾವರಣ ಆಗತ್ತೆ .ತಡರಾತ್ರಿ ಒಂದು ಗಂಟೆಯವರೆಗೆ ಇಲ್ಲಿ ಡಿಜೆ ಸದ್ದಿಗೆ ಕುಣೀತಾರೆ.ಅದರಲ್ಲಿ ಯುವಕ ಯವತಿಯರ ನಶಾಲೋಕವನ್ನ ನೋಡಿದ್ರೆ ಹೆತ್ತ ತಂದೆ ತಾಯಿ ಪಶ್ಚಾತಾಪ ಪಡೋದಂತೂ ಸತ್ಯ.ಇದೀಗ ಹೊಟೆಲ್ ನಲ್ಲಿ ಅರೆ ಬರೆ ಬಟ್ಟೆ ಹಾಕಿಕೊಂಡು ಕುಣಿಯೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಈ ಹೊಟೆಲ್ ಗೆ ಕೆಲ ಹಿರೋಯಿನ್ ಗಳು ,ರಾಜಕಾರಣಿ ಮಕ್ಕಳು ಬಂದು ಹೋಗ್ತಾರೆ.
ಇನ್ನು ವೀಕೆಂಡ್ ಪಾರ್ಟಿ ರೇಟ್ ಕೂಡಾ ಬಲು ದುಬಾರಿ.ವೀಕೆಂಡ್ ಪಾರ್ಟಿ ಹೆಸರಲ್ಲಿ ಮೋಜು ಮಸ್ತಿ ಮಾಡಿ ಹಾಳಾಗೋ ಮುನ್ನ ಇಂತಹ ಪಾರ್ಟಿಗಳಿಗೆ ಪೊಲೀಸರು ಕಡಿವಾಣ ಹಾಕಬೇಕಿದೆ.ಪಾರ್ಟಿ ಗೆ ಅನುಮತಿ ಇದ್ರು,ತಡರಾತ್ರಿವರೆಗೂ ಪಾರ್ಟಿ ಮಾಡಲು ಅವಕಾಶ ಕೊಟ್ಟವರು ಯಾರೂ,ಅನ್ನೋದೆ ಯಕ್ಷ ಪ್ರಶ್ನೆ. ಹೊಟೆಲ್ ಮಾಲೀಕರ ಪ್ರಭಾವ ಕಾರಣವೂ ಇರಬಹುದು.