ಹುಬ್ಬಳ್ಳಿ.
ನಿನ್ನೆ ರಾತ್ರಿ ಮೂವತ್ತು ವರ್ಷದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹುಬ್ಬಳ್ಳಿ ಸಮೀಪ ಶಿವಳ್ಲಿ ರಸ್ತೆಯ ರೇಲ್ವೇ ಬ್ರಿಡ್ಜ್ ಬಳಿ ಎಸೆದು ಹೋಗಿದ್ದಾರೆ.ಯುವಕನ ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಡಿಸಿಪಿ,ಎಸಿಪಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕೊಲೆಯಾದವನು ಯಾರು? ಕೊಲೆ ಮಾಡಿದವರು ಯಾರು?ಎಲ್ಲವೂ ಪೋಲೀಸ ತನಿಖೆಯಿಂದ ಮಾತ್ರ ತಿಳಿದು ಬರಬೇಕಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಪೋಲೀಸ ಠಾಣೆಯ ಪೋಲೀಸರು ತನಿಖೆ ನಡೆಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ