ಪಾಕಿಸ್ತಾನ್ ತಂಡಕ್ಕೆ ಗುಡ್ ಬೈ ಹೇಳಿರುವ ಪಾಕಿಸ್ತಾನದ ಸ್ಪಿನ್ ಬೌಲರ್, ಆಸ್ಟ್ರೇಲಿಯಾ ತಂಡದತ್ತ ಮುಖ ಮಾಡಿದ್ದಾರೆ. ಪಾಕಿಸ್ತಾನ್ ತಂಡದ ಸ್ಪಿನ್ ಬೌಲರ್ ಉಸ್ಮಾನ್ ಖಾದಿರ್ ಪಾಕ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ನಾನು ಪಾಕಿಸ್ತಾನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ಪ್ರಯಾಣದುದ್ದಕ್ಕೂ ನನ್ನ ಜೊತೆಗಿದ್ದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಉಸ್ಮಾನ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ
ಈ ಮೂಲಕ ಇನ್ಮುಂದೆ ಪಾಕಿಸ್ತಾನ್ ಪರ ಆಡುವುದಿಲ್ಲ ಎಂಬುದನ್ನು ಉಸ್ಮಾನ್ ಖಾದಿರ್ ಸ್ಪಷ್ಟಪಡಿಸಿದ್ದಾರೆ. ಇದಾಗ್ಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತನಾಗುತ್ತಿಲ್ಲ ಎಂದಿರುವ ಉಸ್ಮಾನ್, ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾ ಪರ ಆಡುವ ಇಚ್ಛೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಉಸ್ಮಾನ್ ಖಾದಿರ್, ಇನ್ಮುಂದೆ ನಾನು ಪಾಕಿಸ್ತಾನ್ ಪರ ಆಡಲ್ಲ. ನನ್ನ ಮುಂದಿನ ಗುರಿ ಆಸ್ಟ್ರೇಲಿಯಾ ಪರ ಕಣಕ್ಕಿಳಿಯುವುದು. ಎರಡು ವರ್ಷಗಳಲ್ಲಿ ನನಗೆ ಆಸ್ಟ್ರೇಲಿಯಾ ಪೌರತ್ವ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದರು.