ತುಮಕೂರು:- ಇದು ಹೇಳಿ ಕೇಳಿ ರಾಜ್ಯದ ಗೃಹ ಸಚಿವರ ತವರು ಕ್ಷೇತ್ರ. ಆದ್ರೆ ಇಲ್ಲಿಯೇ ಪುಂಡರು ಬಾಲ ಬಿಚ್ಚಿದ್ರೆ ಕಡಿವಾಣ ಯಾರ್ ಹಾಕ್ಬೇಕು. ನೋಡಿ, ಎಷ್ಟು ರಾಜಾರೋಷವಾಗಿ ಈ ಪುಂಡರು ನಡುರಸ್ತೆಯಲ್ಲಿ ಹೀಗೆ ಮಾಡುತ್ತಿದ್ದಾರೆ ಅಂದ್ರೆ ತುಮಕೂರಿನಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಅನ್ನೋದು ಗೊತ್ತಾಗುತ್ತಿದೆ. ಎಸ್, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರ ತವರಲ್ಲಿ ಪುಂಡರು ಎಲ್ಲೆ ಮೀರಿದ್ದಾರೆ. ರಾಜಾರೋಷವಾಗಿ ನಡುರಸ್ತೆಯಲ್ಲಿ ಈ ಯುವಕರು ಮಾಡ್ತಿರೋ ಕೆಲಸ ನೋಡಿದ್ರೆ ಗಾಬರಿ ಬೀಳ್ತೀರಾ.
ಜಿಲ್ಲೆಯ ಗುಬ್ಬಿ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಯುವಕರು ತಲ್ವಾರ್ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಶಾರುಖ್, ಮುಗಲ್ ಪಾಷ ಎಂಬ ಯುವಕರು ರಸ್ತೆ ಮಧ್ಯದಲ್ಲಿ ನಿಂತು ತಲ್ವಾರ್ನಿಂದ ಕೇಕ್ ಕತ್ತರಿಸಿದ್ದಾರೆ. ಅಲ್ಲದೇ, ನಡು ರಸ್ತೆಯಲ್ಲೇ ಪಟಾಕಿ ಪಟಾಕಿ ಸಿಡಿಸಿದ್ದು, ಸವಾರರಿಗೆ ತೊಂದರೆಯಾಯಿತು.
ತಲ್ವಾರ್ನಿಂದ ಕೇಕ್ ಕತ್ತರಿಸಿದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾತಾಣದಲ್ಲಿ ಈ ವಿಡಿಯೋ ಹರಿಬಿಟ್ಟಿದ್ದು, ಮೈ ಕಿಂಗ್ ಬರ್ತಡೆ ಎಂದು ಕ್ಯಾಪ್ಶನ್ ಅಂತ ಹಾಕಿಕೊಂಡಿದ್ದಾರೆ. ಯುವಕರ ಹುಟ್ಟುಹಬ್ಬ ಆಚರಣೆಗೆ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಪೊಲೀಸರು ಈ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.